ಗುವಾಹಟಿ: ಅಸ್ಸಾಂನ ಮಧ್ಯಭಾಗದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 4ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ತಕ್ಷಣಕ್ಕೆ ಭೂಕಂಪದಿಂದ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ.
ನಾಗಾಂವ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿಯ ದಕ್ಷಿಣಕ್ಕೆ 10 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಎನ್‌ಸಿಎಸ್ ಟ್ವೀಟ್‌ನಲ್ಲಿ ತಿಳಿಸಿದೆ.
ಬ್ರಹ್ಮಪುತ್ರ ನದಿಯ ಉತ್ತರಕ್ಕೆ ಸೋನಿತ್‌ಪುರ, ನೆರೆಯ ಪಶ್ಚಿಮ ಕರ್ಬಿ ಆಂಗ್ಲಾಂಗ್, ಕರ್ಬಿ ಆಂಗ್ಲಾಂಗ್, ಗೋಲಾಘಾಟ್ ಮತ್ತು ಮೊರಿಗಾಂವ್ ಜಿಲ್ಲೆಗಳಲ್ಲೂ ಕಂಪನದ ಅನುಭವ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Earthquake of Magnitude:4.0, Occurred on 12-02-2023, 16:18:17 IST, Lat: 26.10 & Long: 92.72, Depth: 10 Km ,Location: Nagaon, Assam, India for more information Download the BhooKamp App seismo.gov.in/MIS/riseq/Inte