ನವದೆಹಲಿ : ಪ್ರಧಾನಿ ಮೋದಿಯವರು ಮಕ್ಕಳು ಮತ್ತು ಪೋಷಕರೊಂದಿಗೆ ನಡೆಸುವ ಪರೀಕ್ಷೆಯ ಮೇಲಿನ ಚರ್ಚೆಯ (ಪರೀಕ್ಷಾ ಪೇ ಚರ್ಚಾ) ಐದು ಆವೃತ್ತಿಗಳಿಗೆ ₹28 ಕೋಟಿಗೂ ಅಧಿಕ ವೆಚ್ಚವಾಗಿದೆ ಎಂದು ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದು, ಮೊದಲ ಆವೃತ್ತಿಗೆ 2018ರಲ್ಲಿ ₹3.37 ಕೋಟಿ, 2019ರಲ್ಲಿ ₹ 4.93ಕೋಟಿ, 2020ರಲ್ಲಿ ₹5.69 ಕೋಟಿ, 2021ರಲ್ಲಿ ₹6ಕೋಟಿ ವೆಚ್ಚ ಹಾಗೂ 2022ರಲ್ಲಿ ₹8.61 ಕೋಟಿ ಹಣ ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.