ಕಾಸರಗೋಡು: ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಎಂ. ರಮಾ ಅವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಸ್‍ಎಫ್‍ಐ ವಿದ್ಯಾರ್ಥಿ ಸಂಘಟನೆಯ 60ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಬಿಪಿನ್‍ರಾಜ್, ಕಾಸರಗೋಡು ಏರಿಯಾ ಕಾರ್ಯದರ್ಶಿ ಇಮಾನ್ಯುವೆಲ್, ಸರ್ಕಾರಿ ಕಾಲೇಜು ಘಟಕ ಕಾರ್ಯದರ್ಶಿ ವಿಪಿನ್‍ರಾಜ್, ಪೂಜಾ, ಸ್ನಿಗ್ದಾ ಸೇರಿದಂತೆ 60ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕಕೆ ಸಂಬಂಧಿಸಿ ದೂರು ನೀಡುವ ನೆಪದಲ್ಲಿ ಆಗಮಿಸಿದ ತಂಡ ಚೇಂಬರ್‍ಗೆ ನುಗ್ಗಿ ಘೆರಾವ್ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ, ಊಟಕ್ಕಾಗಿ ಚೇಂಬರ್‍ನಿಂದ ಹೊರಬರುತ್ತಿದ್ದ ಸಂದರ್ಭ ಸುತ್ತುವರಿದು ಹಲ್ಲೆಗೈದಿರುವುದಾಗಿ ದೂರಿದ್ದಾರೆ.
ಪ್ರಾಂಶುಪಾಲೆ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ-60ಮಂದಿ ಎಸ್‍ಎಫ್‍ಐ ಕಾರ್ಯಕರ್ತರಿಗೆ ಕೇಸು
0
ಫೆಬ್ರವರಿ 25, 2023