ಕಾಸರಗೋಡು: ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಭಜನಾ ಸಂಘದ 66ನೇ ಭಜನಾ ವಾರ್ಷಿಕೋತ್ಸವವು ಶನಿವಾರ ನಡೆಯಿತು. ತಂತ್ರಿವರ್ಯ ಮಾಯಿಪ್ಪಾಡಿ ಬ್ರಹ್ಮಶ್ರೀ ಮಾಧವ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಮಾಯಿಪ್ಪಾಡಿ ಶ್ರೀ ಕೇಶವ ಆಚಾರ್ಯ ಅವರ ದಿವ್ಯ ಹಸ್ತದಿಂದ ದೀಪ್ರಜ್ವಲನೆಗೊಳಿಸಿದರು. ಪುರೋಹಿತ ಪರಕ್ಕಿಲ ಶ್ರೀ ಧಮೇರ್ಂದ್ರ ಆಚಾರ್ಯ ಇವರ ಆಚಾರ್ಯತ್ವದಲ್ಲಿ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರಗಿತು.
ಊರ ಪರಊರ ವಿವಿಧ ಭಜನಾ ತಂಡಗಳು ಭಜನೆ ಸಂಕೀರ್ತನೆ ನಡೆಸಿಕೊಟ್ಟರು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಮಕ್ಕಳು ದೀಪ ಹಿಡಿದು ಭಜನೆ ಹಾಡುತ್ತಾ ಜೊತೆಗೆ ಚಂಡೆ ನಾಸಿಕ್ ಬ್ಯಾಂಡ್ ಮಹಿಳೆಯರು ಹಾಗೂ ಮಹನೀಯರು ಸಮವಸ್ತ್ರ ಧರಿಸಿ ಅಲಂಕಾರ ಕೊಡೆಯೊಂದಿಗೆ ಶ್ರೀ ಮಂದಿರಕ್ಕೆ ಅಗತ್ಯ ವಸ್ತುಗಳೊಂದಿಗೆ ಹುಲ್ಪೆ ಮೆರವಣಿಗೆ ಆಗಮಿಸಲಾಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಯಿತು. ವಾರ್ಷಿಕೋತ್ಸವ ಪ್ರಯುಕ್ತ ಸಂಘದ ಲಕ್ಕಿಕೂಪನ್ ಡ್ರಾ ಮಾಡಲಾಯಿತು. ಈ ಸಂಧರ್ಭದಲ್ಲಿ ಶ್ರೀ ವಿಶ್ವಕರ್ಮ ಯುವಕ ಸಂಘ ಹಾಗೂ ಶ್ರೀ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.