ತಿರುವನಂತಪುರ: ಕೆ ಫೆÇೀನ್ ಯೋಜನೆ ಅನುμÁ್ಠನಕ್ಕೆ 100 ಕೋಟಿ ರೂ. ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ. ಈ ಮೂಲಕ 70,000 ಕುಟುಂಬಗಳಿಗೆ ಉಚಿತ ಮನೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲಾಗುವುದು.
ಸ್ಟಾರ್ಟಪ್ ಮಿಷನ್ ಬಜೆಟ್‍ನಲ್ಲಿ 90.2 ಕೋಟಿ ಮೀಸಲಿಡಲಾಗಿದೆ. ಟೆಕ್ನೋ ಪಾರ್ಕ್‍ಗೆ 26 ಕೋಟಿ ಮತ್ತು ಇನ್ಫೋ ಪಾರ್ಕ್‍ಗೆ 25 ಕೋಟಿ. ರೈಲ್ವೆ ಸುರಕ್ಷತೆಗೆ 12 ಕೋಟಿ ಮತ್ತು ಜಿಲ್ಲಾ ರಸ್ತೆಗಳಿಗೆ 288 ಕೋಟಿ.ಮೀಸಲಿಡಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾಜಿರ್ಂಗ್ ಕೇಂದ್ರಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ 7.9 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಘೋಷಿಸಿದರು. ಕೆಎಸ್‍ಆರ್‍ಟಿಸಿ ಬಸ್ ಟರ್ಮಿನಲ್‍ಗಳ ನವೀಕರಣಕ್ಕೆ 20 ಕೋಟಿ ರೂ.ಮೀಸಲಿಡಲಾಗಿದೆ.
ರಾಜ್ಯದ 70,000 ಮನೆಗಳಿಗೆ ಉಚಿತ ಇಂಟರ್ನೆಟ್ ಸಂಪರ್ಕ; ಜಿಲ್ಲಾ ರಸ್ತೆಗಳಿಗೆ 288 ಕೋಟಿ ರೂ
0
ಫೆಬ್ರವರಿ 03, 2023