ಈ ನಿರ್ಧಾರವು ಭಾರತೀಯ ರಕ್ಷಣಾ ಸಾಮಾಗ್ರಿಗಳ ತಯಾರಕರಿಗೆ ಮತ್ತು ಸಲಕರಣೆಗಳ ಖರೀದಿಗೆ ಸುಮಾರು 100,000 ಕೋಟಿ ರೂಪಾಯಿಗಳನ್ನು ಮೀಸಲಿಡುತ್ತದೆ ಎಂದು ರಕ್ಷಣಾ ಸಚಿವರು ತಿಳಿಸಿದರು. ಏರೋ ಇಂಡಿಯಾ 2023 ರಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ರಕ್ಷಣಾ ಕಂಪನಿಗಳ ಜೊತೆ ಹಲವಾರು ಒಪ್ಪಂದಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ರಾಜನಾಥ್ ಸಿಂಗ್ ಹೇಳಿದ್ದಾರೆ.
" ಇದು ಅತ್ಯಂತ ಮಹತ್ವದ ನಿರ್ಧಾರವಾಗಿದ್ದು, ಇದು ದೇಶೀಯ ರಕ್ಷಣಾ ಉತ್ಪಾದನಾ ವಲಯವನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಸಿಂಗ್ ತಿಳಿಸಿದ್ದಾರೆ. ಏರೋ ಇಂಡಿಯಾದ ಸಂದರ್ಭದಲ್ಲಿ ಸಹಿ ಹಾಕಲಾದ ಎಂಒಯುಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳು ದೇಶದ ರಕ್ಷಣಾ ಉತ್ಪಾದನೆಯ ಹೊಸ ಯುಗ ಆರಂಭಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.