ತಿರುವನಂತಪುರಂ: ಐತಿಹಾಸಿಕ ಅಟ್ಟುಕ್ಕಾಲ್ ಪೊಂಗಲ್ ಮಹೋತ್ಸವ ಫೆ. 27ರಂದು ಆರಂಭವಾಗಲಿದೆ. ಕರೋನಾ ಮಹಾಮಾರಿಯ ಎರಡು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಲು ಅನಂತಪುರಿ ಸಜ್ಜಾಗಿದೆ.
ಈ ಬಾರಿ ಅಟ್ಟುಕ್ಕಾಲ್ ಭಗವತಿ ಅಮ್ಮನಿಗೆ ಪೊಂಗಲ್ ಅರ್ಪಿಸಲು ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ.
27ರಂದು ಮುಂಜಾನೆ 4.30ಕ್ಕೆ ಕಾಪು ಕಟ್ಟುವುದು, ಧ್ವಜಾರೋಹಣದೊಂದಿಗೆ ಪೊಂಗಲ್ ಹಬ್ಬದ ಕಾರ್ಯಕ್ರಮಗಳು ಆರಂಭವಾಗಲಿವೆ. ಮಾರ್ಚ್ 7 ರಂದು ಪೊಂಗಲ್ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಪೊಂಗಲಿಗೆ ಅಗ್ನಿಸ್ಪರ್ಶ ಮಾಡಲಾಗುವುದು. ಮಧ್ಯಾಹ್ನ 2.30ಕ್ಕೆ ಮಧ್ಯಾಹ್ನಪೂಜೆ, ನಂತರ ಪೊಂಗಲ್ ನೈವೇದ್ಯ ಸಮರ್ಪಣೆ ನಡೆಯಲಿದೆ. ಈ ಬಾರಿ 732 ಬಾಲಕರು ಹೆಸರು ನೋಂದಾಯಿಸಿದ್ದಾರೆ. ಮಾರ್ಚ್ 1ರಂದು ಬೆಳಗ್ಗೆ 9.20ಕ್ಕೆ ಕುತ್ತಿಯೊಟ್ಟ ವ್ರತ ಆರಂಭವಾಗಲಿದೆ.
ಮಾ.6ರವರೆಗೆ ಅಂಬಾ, ಅಂಬಿಕಾ, ಅಂಬಾಲಿಕಾ ಸಭಾಂಗಣಗಳಲ್ಲಿ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 6ಕ್ಕೆ ಆರಂಭವಾಗುವ ಕಾರ್ಯಕ್ರಮ ರಾತ್ರಿ 11ರವರೆಗೆ ನಡೆಯಲಿದೆ. 27ರಂದು ಸಂಜೆ 6ಕ್ಕೆ ಚಿತ್ರನಟ ಉಣ್ಣಿಮುಕುಂದನ್ ಕಲಾ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಈ ಸಂದರ್ಭದಲ್ಲಿ ಸಮುದಾಯದ ಹೋರಾಟಗಾರ್ತಿ ಡಾ.ಪಿ.ಭಾನುಮತಿ ಅವರಿಗೆ ಅಟ್ಟುಕ್ಕಾಲ್ ಅಂಬಾ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಸ್ಥಳೀಯ ಸಮಿತಿಗಳು ಮತ್ತು ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿವೆ. ಸ್ಥಳೀಯ ಉತ್ಸವ ಸಮಿತಿಗಳು ನಗರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಸರ್ಕಾರದ ವಿವಿಧ ಇಲಾಖೆಗಳ ಸಿದ್ಧತೆಯೂ ಅಂತಿಮ ಹಂತ ತಲುಪಿದೆ. ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಅಧ್ಯಕ್ಷತೆಯಲ್ಲಿ ಶನಿವಾರ ಸಿದ್ಧತೆಗಳ ಪರಿಶೀಲನೆ ಸಭೆ ನಡೆಯಿತು.
ಮಾರ್ಚ್ 7 ರಂದು ಅಟ್ಟುಕ್ಕಾಲ್ ಪೊಂಗಲ್ ಮಹೋತ್ಸವ: ಅನಂತಪುರಿಯಲ್ಲಿ ಭರದ ಸಿದ್ದತೆ
0
ಫೆಬ್ರವರಿ 19, 2023
Tags