ಕೊಚ್ಚಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮುತ್ತೂಟ್ ಫೈನಾನ್ಸ್‍ನ ಕ್ರೋಢೀಕೃತ ನಿವ್ವಳ ಲಾಭವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಾಲ್ಕು ಶೇಕಡಾ ಏರಿಕೆಯಾಗಿ 934 ಕೋಟಿ ರೂಪಾಯಿಗಳಿಗೆ ತಲುಪಿದೆ.
ನಿರ್ವಹಣೆಯಲ್ಲಿರುವ ಆಸ್ತಿಯೂ 65,085 ಕೋಟಿ ರೂ.ಗೆ ತಲುಪಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 54 ಹೊಸ ಶಾಖೆಗಳನ್ನು ತೆರೆಯಿತು. ಕಂಪನಿಯು 28 ಮತ್ತು 29 ಸುರಕ್ಷಿತ ರಿಡೀಮ್ ಮಾಡಬಹುದಾದ ಎನ್.ಸಿ.ಡಿ ಗಳ ಮೂಲಕ 422 ಕೋಟಿ ರೂ.ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುತ್ತೂಟ್ ಗ್ರೂಪ್ ಅಧ್ಯಕ್ಷ ಜಾರ್ಜ್ ಜೇಕಬ್ ಮುತ್ತೂಟ್, ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ಅಂಕಿಅಂಶಗಳು ಸ್ಥಿರ ಪ್ರದರ್ಶನವನ್ನು ಸೂಚಿಸಿವೆ. ಅಂಗಸಂಸ್ಥೆಗಳ ನಿರ್ವಹಣೆಯಲ್ಲಿರುವ ಸ್ವತ್ತುಗಳು ಸ್ವಲ್ಪಮಟ್ಟಿಗೆ 12 ಪ್ರತಿಶತಕ್ಕೆ ಏರಿತು. ಚಿನ್ನೇತರ ವಲಯದಲ್ಲೂ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮುತ್ತೂಟ್ ಫೈನಾನ್ಸ್ ವಾರ್ಷಿಕವಾಗಿ ಸಾಲದ ಆಸ್ತಿಯಲ್ಲಿ ಶೇಕಡಾ ಆರು ಹೆಚ್ಚಳವನ್ನು ದಾಖಲಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್ ಹೇಳಿದ್ದಾರೆ. ಬಡ್ಡಿದರಗಳ ಒಟ್ಟಾರೆ ಹೆಚ್ಚಳದ ಪರಿಣಾಮವಾಗಿ, ಸಾಲದ ವೆಚ್ಚವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ತ್ರೈಮಾಸಿಕದಲ್ಲಿ ಆಸ್ತಿ ಮೇಲಿನ ಆದಾಯವು ಶೇ 6.27 ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.
ಮುತ್ತೂಟ್ ಫೈನಾನ್ಸ್‍ನ ನಿವ್ವಳ ಲಾಭ ಶೇಕಡಾ ನಾಲ್ಕು ಏರಿಕೆಯಾಗಿ 934 ಕೋಟಿ ರೂ ತಲಪಿದ ಮಟ್ಟ
0
ಫೆಬ್ರವರಿ 07, 2023