ಬದಿಯಡ್ಕ: ಡಾ.ಮಾಲಿನಿ ಸರಳಾಯ ಸ್ಮರಣಾರ್ಥ ಬದಿಯಡ್ಕದ ಡಾ.ಶ್ರೀನಿಧಿ ಕ್ಲಿನಿಕ್ ನಾಳೆ(ಫೆ.19) ಬದಿಯಡ್ಕದ ಕ್ರಿಯೆಟಿವ್ ಕಾಲೇಜು ಪರಿಸರದಲ್ಲಿ ಬೆಳಿಗ್ಗೆ 9.30 ರಿಂದ 12.30ರ ವರೆಗೆ ಉಚಿತ ವಿಶೇಷ ವ್ಯದ್ಯಕೀಯ ತಪಾಸಣಾ ಶಿಬಿರ ಆಯೋಜಿಸಿದೆ.
ಶಿಬಿರದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ.ನರಸಿಂಹ ಪೈ, ಕಿಡ್ನಿ ತಜ್ಞ ಡಾ.ಮಯೂರ ಪ್ರಭು, ನೇತ್ರತಜ್ಞ ಡಾ.ಕೀರ್ತನ್ ರಾವ್, ಕ್ಯಾನ್ಸರ್ ತಜ್ಞ ಡಾ.ಅತಿಯಮಾನ್ ಭಾಗವಹಿಸುವರು. ಜೊತೆಗೆ ಜನರಲ್ ಸರ್ಜರಿ, ಗ್ಯಾಸ್ಟ್ರೋ, ಇ.ಎನ್.ಟಿ., ಮೂಳೆ, ಮಕ್ಕಳ ವಿಭಾಗ ಸಹಿತ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತಜ್ಞರ ತಪಾಸಣೆ, ಉಚಿತ ಔಷಧ ವಿತರಣೆ, ಕೆ.ಎಂ.ಸಿ. ಆಸ್ಪತ್ರೆಯ ಆರೋಗ್ಯ ಕಾರ್ಡ್ ನೋಂದಾವಣೆ, ವಿತರಣೆ, ಉಚಿತ ಇ.ಸಿ.ಜಿ ಮೊದಲಾದ ಸೌಲಭ್ಯಗಳಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ನಿಂದ ಉಚಿತ ಸೂಪರ್ ಸ್ಪೆಶಾಲಿಟಿ ಮೆಡಿಕಲ್ ಕ್ಯಾಂಪ್ ನಾಳೆ
0
ಫೆಬ್ರವರಿ 17, 2023