HEALTH TIPS

ದೇಶದಲ್ಲೇ ಮೊದಲು: ಸಮುದ್ರದೊಳಗೆ ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ನಿಲ್ದಾಣ!

 

            ಮುಂಬೈ: ದಿರ್ಘಾವಧಿ ಕಾಯುವಿಕೆ ನಂತರ, ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಬಹುನಿರೀಕ್ಷಿತ ಹೈಸ್ಪೀಡ್ ರೈಲು (ಬುಲೆಟ್ ರೈಲು ಯೋಜನೆ ಕಾಮಗಾರಿ ಆರಂಭವಾಗಿದೆ. 

                ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರ್ ನ ಭಾಗವಾಗಿ ಮಹಾರಾಷ್ಟ್ರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಹಾಗೂ ಶಿಲ್ಪಾತ ನಡುವಿನ ಡಬಲ್ ಲೈನ್ ಗಾಗಿ ಟನಲ್ ನಿರ್ಮಾಣ ಕಾಮಗಾರಿಗೆ ಫೆ.10 ರಂದು ಚಾಲನೆ ದೊರೆತಿದೆ.
  
              ಒಟ್ಟು 508.17 ಕಿ.ಮೀ ನ ರೈಲು ಮಾರ್ಗದ ಪೈಕಿ 21 ಕಿ.ಮೀ ಟ್ರ್ಯಾಕ್ ನೆಲದಡಿಯಲ್ಲಿ (underground) ನಲ್ಲಿ ನಿರ್ಮಾಣ ವಾಗಲಿದ್ದು, ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ಏಕೈಕ ರೈಲು ಮಾರ್ಗ ಇದಾಗಿದ್ದು ಉಳಿದ ಮಾರ್ಗ ಎತ್ತರದಲ್ಲಿ ಹಾದುಹೋಗಲಿದೆ.
 
                   ಈ ಟನಲ್ ನಿರ್ಮಾಣವಾಗುವ ಸುತ್ತಮುತ್ತಲ ಪ್ರದೇಶ (ಥಾಣೆ ಕ್ರೀಕ್, ಅಥವಾ ಥಾಣೆ ತೊರೆ)ಯಲ್ಲಿ ಪಕ್ಷಿಧಾಮ ಹಾಗೂ ಮ್ಯಾಂಗ್ರೋವ್ಸ್ ಇರುವುದರಿಂದ ಅವುಗಳ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ನೆಲದಡಿಯಲ್ಲಿ ನಿರ್ಮಾಣವಾಗುತ್ತಿರುವ ರೈಲು ಮಾರ್ಗಕ್ಕೆ ನೈಸರ್ಗಿಕ ಬೆಳಕನ್ನು ಒದಗಿಸುವ ದೃಷ್ಟಿಯಿಂದ ಸ್ಕೈಲೈಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

               ಈ ಯೋಜನೆಯ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ಅದು ಸಮುದ್ರದ ಒಳಭಾಗದಲ್ಲಿ ಹಾದುಹೋಗಲಿರುವ ಟನಲ್ ಗಳು. ಈ ರೀತಿಯ 7 ಟನಲ್ ಗಳು ಬುಲೆಟ್ ರೈಲುಗಳ ಭಾಗವಾಗಿರಲಿದ್ದು, ಟನಲ್ ಬೋರಿಂಗ್ ಯಂತ್ರ (ಟಿಬಿಎಂ) ಹಾಗೂ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನವನ್ನು ಬಳಸಿ ಬಿಕೆಸಿ ಹಾಗೂ ಶಿಲ್ಪಾತ ನಡುವೆ ನಿರ್ಮಾಣವಾಗಲಿದೆ. 

               ಈ 7 ಕಿ.ಮೀ ನ ಸಮುದ್ರದ ಸುರಂಗ ದೇಶದಲ್ಲೇ ಮೊದಲ ಸಮುದ್ರದ ಸುರಂಗವಾಗಿರಲಿದೆ ಎಂದು ರೈಲ್ವೆ ಮಾಹಿತಿ ನೀಡಿದೆ. 

                    ಈ ಟನಲ್ ಭೂಮಿಯ ಮಟ್ಟದಿಂದ 25-65 ಮೀಟರ್ ನಷ್ಟು ಆಳವಾಗಿರಲಿದ್ದು, ಶಿಲ್ಪಾತದ ಬಳಿ ಪಾರ್ಸಿಕ್ ಹಿಲ್ ನಲ್ಲಿ 114 ಮೀಟರ್ ಕೆಳಭಾಗದಲ್ಲಿ ನಿರ್ಮಾಣವಾಗುತ್ತಿರುವ ಟನಲ್ ಅತ್ಯಂತ ಆಳವಾದ ಟನಲ್ ಆಗಿರಲಿದೆ. ಟನಲ್ ನಿರ್ಮಾಣಕ್ಕೆ ಭಾರತ ಅತ್ಯಾಧುನಿಕ,  ನ್ಯೂ ಆಸ್ಟ್ರಿಯನ್ ಸುರಂಗ ವಿಧಾನವನ್ನು ಅನುಸರಿಸುತ್ತಿದೆ. 

              2022 ರ ಸೆಪ್ಟೆಂಬರ್ 23 ರಂದು ಇದಕ್ಕಾಗಿ ಟೆಂಡರ್ ಕರೆಯಲಾಗಿತ್ತು ಹಾಗೂ ಈ ಯೋಜನೆಗಾಗಿ ಶೇ.98.79 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಯೋಜನೆಯ ಮೇಲೆ ನಿಗಾ ವಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries