ಬದಿಯಡ್ಕ: ಬೇಳ ಸೈಂಟ್ ಮರಿಯಾಸ್ ಕಾಲೇಜಿನ ಎನ್.ಎಸ್.ಎಸ್ ಘಟಕದ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರಿನ ಲೇಡಿಗೋಶನ್ ಆಶ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಇಂದು(ಮಾ.1) ಬೆಳಿಗ್ಗೆ 10 ರಿಂದ ಕಾಲೇಜು ಅಡಿಟೋರಿಯಂನಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಸಮಾರಂಭವನ್ನು ಕಾಲೇಜು ಪ್ರಾಂಶುಪಾಲ ಫಾದರ್. ಅನಿಲ್ ಅವಿಲ್ಡ್ ಲೊಬೋ ಉದ್ಘಾಟಿಸುವರು. ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಜೆ.ಎನ್.ಭಟ್, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಸಂಯೋಜಕ ಪ್ರವೀಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಾಲೇಜು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಅರವಿಂದ ಪೈ, ಎನ್.ಎಸ್.ಎಸ್. ವಿದ್ಯಾರ್ಥಿ ಸಂಯೋಜಕರಾದ ತೇಜಸ್ ಹಾಗೂ ಫಾತಿಮತ್ ಸಾನಾ ನೇತೃತ್ವ ವಹಿಸುವರು.
ಬೇಳದಲ್ಲಿ ಇಂದು ರಕ್ತದಾನ ಶಿಬಿರ
0
ಫೆಬ್ರವರಿ 28, 2023