ಕಾಸರಗೋಡು: ಸಬ್‍ಡಿವಿಶನ್ ಡಿವೈಎಸ್‍ಪಿಯಾಗಿ ಪಿ.ಕೆ ಸುಧಾಕರನ್ ಮಂಗಳವಾರ ಅಧಿಖಾರ ಸ್ವೀಕರಿಸಿದರು. ಈ ಹಿಂದೆ ಸ್ಪೆಶ್ಯಲ್ ಬ್ರಾಂಚ್ ಡಿವೈಎಸ್ಪಿಯಾಗಿದ್ದರು. ಹೆಚ್ಚುವರಿ ಎಸ್.ಪಿ ನದಿಮುದ್ದೀನ್ ಅವರು ದಈರ್ಘ ಕಾಲದ ರಜೆಯಲ್ಲಿ ತೆರಳಿರುವ ಹಿನ್ನೆಲೆಯಲ್ಲಿ ಪಿ.ಕೆ ಸುಧಾಕರನ್ ಅವರನ್ನು ಡಿವೈಎಸ್‍ಪಿ ಸ್ಥಾನಕ್ಕೆ ನೇಮಿಸಲಾಗಿದೆ.
ಮೂರಕ್ಕಿಂತ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಶಾಮೀಲಾದವರ ವಿರುದ್ಧ ಇನ್ನು ಮುಂದೆ 'ಕಾಪಾ'ಕಾಯ್ದೆಯನ್ವಯ ಕೇಸು ದಾಖಲಿಸಿ ಜೈಲಿಗಟ್ಟಲಾಗುವುದು. ಮಂಜೇಶ್ವರ, ಉಪ್ಪಳ ಭಾಗದಲ್ಲಿ ಜಾಗೃತಗೊಂಡಿರುವ ಮರಳು, ಗಾಂಜಾ ಸೇರಿದಂತೆ ಮಾದಕದ್ರವ್ಯ ಮಾಫಿಯಾ ಮಟ್ಟಹಾಕಲಾಗುವುದು ಜತೆಗೆ ಕಾಸರಗೋಡು ನಗರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದೂ ಪಿ.ಕೆ ಸುಧಾಕರನ್ ತಿಳಿಸಿದ್ದಾರೆ.
ಸಬ್‍ಡಿವಿಶನ್ ಡಿವೈಎಸ್‍ಪಿಯಾಗಿ ಪಿ.ಕೆ ಸುಧಾಕರನ್ ಅಧಿಕಾರ ಸ್ವೀಕಾರ
0
ಫೆಬ್ರವರಿ 28, 2023