ಬದಿಯಡ್ಕ: ವಿವಿಧ ಬೇಡಿಕೆಗಳೊಂದಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಸಮಿತಿಯು ಮುನ್ನಡೆಸುತ್ತಿರುವ ವಾಹನ ಪ್ರಚಾರ ಜಾಥಾವನ್ನು ಶುಕ್ರವಾರ ಬದಿಯಡ್ಕ ಪೇಟೆಯಲ್ಲಿ ಘಟಕದ ವತಿಯಿಂದ ಸ್ವಾಗತಿಸಲಾಯಿತು.
ಜಾಥಾ ನಾಯಕ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಅಹಮ್ಮದ್ ಶರೀಫ್ ಮಾತನಾಡಿ ವ್ಯಾಪಾರಿಗಳಿಗೆ ಮಾರಕವಾಗುವಂತಹ ಕಾನೂನನ್ನು ಜ್ಯಾರಿಗೊಳಿಸಿದ ರಾಜ್ಯ ಸರ್ಕಾರದ ವಿರುದ್ಧ ನಾವು ಹೋರಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಎಲ್ಲಾ ವ್ಯಾಪಾರಿ ಸದಸ್ಯರೂ ಪಕ್ಷಬೇಧ ಮರೆತು ಒಂದಾಗಬೇಕಿದೆ. ಒಂದೆಡೆ ರಾಜ್ಯ ಸರ್ಕಾರವು ಇಂಧನದ ಬೆಲೆಯನ್ನು ಹೆಚ್ಚಳಗೊಳಿಸಿದೆ. ಆಹಾರೋತ್ಪನ್ನ ಸಾಮಾಗ್ರಿಗಳ ಅಂಗಡಿಗಳ ನೌಕರರಿಗೆ ಆರೋಗ್ಯ ಚೀಟಿ ಅಗತ್ಯ ಬೇಕು ಎಂಬ ಕಾನೂನನ್ನು ತಂದಿದೆ. ಅತಿಯಾದ ತೆರಿಗೆ ಮೊದಲಾದ ಕಾನೂನುಗಳಿಂದ ವ್ಯಾಪಾರಿ ಸಮುದಾಯವು ಕಷ್ಟವನ್ನು ಅನುಭವಿಸುವಂತಾಗಿದೆ ಎಂದರು.
ಜಾಥಾ ಪ್ರಬಂಧಕ ಅಶೋಕನ್, ಶಿಹಾಬ್ ಉಸ್ಮಾನ್, ದಿನೇಶ್, ನಿರುಪಮಾ ಶೆಣೈ, ಗಣೇಶವತ್ಸ ಮೊದಲಾದವರು ಮಾತನಾಡಿದರು. ಬದಿಯಡ್ಕ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೇವ ಶೆಣೈ ಬದಿಯಡ್ಕ ಸ್ವಾಗತಿಸಿ, ಹಮೀದ್ ವಂದಿಸಿದರು. ಫೆ.21ರಂದು ತೃಕ್ಕರಿಪುರದಿಂದ ಆರಂಭವಾದ ವಾಹನ ಜಾಥಾ ಪೆ.25ರಂದು ಮುಕ್ತಾಯವಾಗಲಿದೆ. ಫೆ.28ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯಾಪಾರಿಗಳಿಂದ ಪ್ರತಿಭಟನೆ ನಡೆಯಲಿದೆ.
ವ್ಯಾಪಾರಿ ವಾಹನ ಪ್ರಚಾರ ಜಾಥಾಕ್ಕೆ ಬದಿಯಡ್ಕದಲ್ಲಿ ಸ್ವಾಗತ
0
ಫೆಬ್ರವರಿ 25, 2023
Tags