ನವದೆಹಲಿ: ದೆಹಲಿ ಮೆಟ್ರೊದ ಕೆಂಪು ಮಾರ್ಗದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಿಗ್ನಲಿಂಗ್ ತಂತ್ರಜ್ಞಾನ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು (ಐ-ಎಟಿಎಸ್) ಶನಿವಾರ ಉದ್ಘಾಟಿಸಲಾಯಿತು.
'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ್' ಅಡಿ ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜಂಟಿ ತಂಡ ದೇಶದ ಮೊದಲ ಐ-ಎಟಿಎಸ್ ವ್ಯವಸ್ಥೆಯನ್ನು ರೂಪಿಸಿದೆ.