ಕಾಸರಗೋಡು: ಸರ್ಕಾರಿ ಕಾಲೇಜಿನ ವಾಟರ್ ಪ್ಯೂರಿಫೈಯರ್‍ನಲ್ಲಿ ಕೊಳಕು ಕಾಣಿಸಿಕೊಂಡಿದೆ ಎಂಬ ವಿದ್ಯಾರ್ಥಿಗಳ ದೂರು ನಿಜವಾಗಿದೆ ಎಂದು ವರದಿಯಾಗಿದೆ.
ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ನೀಡಲು ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ, ಧರಣಿ ನಡೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ಫಲಿತಾಂಶ ಇದೀಗ ಹೊರಬಿದ್ದಿದೆ.
ಕಾಲೇಜಿನ ಪ್ಯೂರಿಫೈಯರ್ ನಿಂದ ಸಂಗ್ರಹವಾಗುವ ನೀರು ಕಲುಷಿತಗೊಂಡಿದೆ ಎಂಬ ವರದಿ ಹೊರಬಿದ್ದಿದೆ. ಕುಡಿಯುವ ನೀರಿನಲ್ಲೂ ಇ-ಕೋಲಿ ಬ್ಯಾಕ್ಟೀರಿಯಾ ಇರುವುದನ್ನು ಜಲ ಪ್ರಾಧಿಕಾರ ಪತ್ತೆ ಮಾಡಿದೆ. ಇದರೊಂದಿಗೆ ಮಾಜಿ ಪ್ರಾಂಶುಪಾಲೆ ಎಂ.ರಮಾ ಅವರ ವಾದಕ್ಕೆ ತೆರೆ ಬಿದ್ದಿದೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿರೋಧಿಸಿದ್ದ ಎಂ.ರಮಾ, ಕಾಲೇಜಿಗೆ ಸರಬರಾಜಾಗುತ್ತಿರುವ ನೀರು ಕಲುಷಿತವಾಗಿಲ್ಲ, ಅದನ್ನು ಪರಿಶೀಲಿಸಿದ್ದೇನೆ ಎಂದು ವಾದಿಸಿದ್ದರು. ಕ್ಯಾಂಪಸ್‍ನಲ್ಲಿ ಡ್ರಗ್ಸ್ ಮಾರಾಟ ಸಕ್ರಿಯವಾಗಿದ್ದು, ಎಸ್‍ಎಫ್‍ಐ ನೇತೃತ್ವದಲ್ಲಿ ಕ್ಯಾಂಪಸ್‍ನಲ್ಲಿ ಅನೈತಿಕತೆ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿರುವುದೇ ತಮ್ಮ ವಿರುದ್ಧ ಆರೋಪಕ್ಕೆ ಕಾರಣ ಎಂದು ಎಂ.ರಮ ಆರೋಪಿಸಿದ್ದರು.
ಕಳೆದ ಸೋಮವಾರ ಈ ಘಟನಾವಳಿಗಳ ಆರಂಭಕ್ಕೆ ನಾಂದಿಯಾಗಿತ್ತು. ಕ್ಯಾಂಪಸ್‍ನಲ್ಲಿರುವ ವಾಟರ್ ಪ್ಯೂರಿಫೈಯರ್‍ನಲ್ಲಿನ ನೀರಿನಲ್ಲಿರುವ ಕೊಳೆ ನೋಡಿದ ಪ್ರಾಂಶುಪಾಲರು ವಿದ್ಯಾರ್ಥಿಗಳು ಧರಣಿ ನಡೆಸಬಾರದು ಎಂಬ ನಿಲುವು ತಳೆದು ನೀರು ಕುಡಿದರೆ ಸಾಕು, ಮಾತನಾಡಲು ಈಗ ಸಮಯವಿಲ್ಲ ಎಂದು ಜಾರಿಕೊಂಡಿದ್ದರು. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ನಿರ್ಧರಿಸಿದಾಗ, ಪ್ರಾಂಶುಪಾಲೆ ಎಂ.ರಮಾ ಅವರು ಹೊರಗೆ ಬಂದು ಸುಮಾರು ಹದಿನೈದು ವಿದ್ಯಾರ್ಥಿಗಳು ಕುಳಿತಿದ್ದ ತಮ್ಮ ಚೇಂಬರ್‍ಗೆ ಬೀಗ ಹಾಕಿದ್ದರು. ಎಂ ರಮಾ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ. ವಿದ್ಯಾರ್ಥಿಗಳು ಆರಂಭಿಸಿದ ವಿವಾದದಲ್ಲಿ ಎಂ ರಮಾ ಸಿಲುಕಿದ್ದಾರೆ.
ಕಾಸರಗೋಡು ಕಾಲೇಜಿನ ವಿವಾದ ಹೊಸ ತಿರುವಿಗೆ: ಕುಡಿಯುವ ನೀರಲ್ಲಿ ಕಲುಷಿತ, ಮಾರಣಾಂತಿಕ ಬ್ಯಾಕ್ಟೀರಿಯಾಗಳ ಪತ್ತೆಮಾಡಿದ ಲ್ಯಾಬ್ ವರದಿ
0
ಫೆಬ್ರವರಿ 26, 2023
Tags