ಕುಂಬಳೆ: ಕುಂಬಳೆಯ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕುಂಟಂಗೇರಡ್ಕ ಸಮುದಾಯ ಭವನದಲ್ಲಿ ಚರ್ಮ ರೋಗ ತಪಾಸಣಾ ವೈದ್ಯಕೀಯ ಶಿಬಿರ ನಡೆಸಲಾಯಿತು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ತರಗತಿ ನಡೆಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ಚರ್ಮರೋಗ ತಜ್ಞೆ ಡಾ.ಫಾತಿಮ್ಮತ್ ರುಬೀನಾ ಎಸ್. ಆರ್, ಕಿರಿಯ ಆರೋಗ್ಯ ನಿರೀಕ್ಷಕ ಆದರ್ಶ ಕೆ.ಕೆ ಮಾತನಾಡಿದರು.
ಕುಂಬಳೆ ಕುಂಟಂಗೇರಡ್ಕದಲ್ಲಿ ಚರ್ಮ ರೋಗ ವೈದ್ಯಕೀಯ ಶಿಬಿರ
0
ಫೆಬ್ರವರಿ 21, 2023