ಬದಿಯಡ್ಕ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಗೋಕರ್ಣದ ಅಶೋಕೆಯಲ್ಲಿ ಕೊಡಗಿನ ಗೌರಮ್ಮ ಕಥಾಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಜರಗಿತು.
ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ವಿಜೇತರಿಗೆ ಶ್ರೀಗಳು ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು. ಪ್ರಥಮ ಪ್ರಶಸ್ತಿ ವಿಜೇತರಾದ ಲತಾ ಹೆಗಡೆ ಹುಬ್ಬಳ್ಳಿ, ದ್ವಿತೀಯ ಸಂಧ್ಯಾ ಭಟ್ ಅರಂತಾಡಿ ಹಾಗೂ ತೃತೀಯ ವಿಜೇತೆ ಸತ್ಯವತಿ ಕೊಳಚಪ್ಪು ಇವರು ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ಬಹುಮಾನಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಸರಗೋಡಿನ ಪ್ರಸಿದ್ಧ ಲೇಖಕಿ ಪ್ರಸನ್ನಾ ವಿ ಚೆಕ್ಕೆಮನೆಯವರ ಹೂಮಳೆಗೆ ಮಿನುಗುವ ಮೇಘಗಳು ಎಂಬ ಕಥಾಸಂಕಲನ ಹಾಗೂ ಇರಬೇಕಿತ್ತು ನೀ ಹತ್ತಿರ ಎಂಬ ಕಾದಂಬರಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿ ಲೇಖಕಿಯನ್ನು ಹರಸಿದರು. ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ದತ್ತಿನಿ ಕಥಾಸ್ಪರ್ಧೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಥಾಸ್ಪರ್ಧೆಯನ್ನು ಸಂಚಾಲಕಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು.
ಕೊಡಗಿನ ಗೌರಮ್ಮಕಥಾ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ
0
ಫೆಬ್ರವರಿ 21, 2023
Tags