HEALTH TIPS

ಕನ್ನಡದ ಅದಮ್ಯ ಚೇತನ, ಪ್ರಾಧ್ಯಾಪಕ ದಿ. ಪಿ.ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಮಾರಂಭ

 



         ಕಾಸರಗೋಡು : ಕನ್ನಡದ ಹಿರಿಯ ವಿದ್ವಾಂಸ, ಕನ್ನಡ ಪ್ರಾಧ್ಯಾಪಕ, ದಿ.ಪಿ.ಸುಬ್ರಾಯ ಭಟ್ಟ ಅವರ ಜನ್ಮಶತಮಾನೋತ್ಸವ ಸಮಾರಂಭ ಫೆ. 26ರಂದು ಬೆಳಗ್ಗೆ 9.30ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.
           ಭಾಷೆ, ಸಾಹಿತ್ಯ, ತರ್ಕ, ವ್ಯಾಕರಣ-ವೇದಾಂತಶಾಸ್ತ್ರ ಹೀಗೆ ನಾನಾ ವಿಷಯಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಅಧ್ಯಯನ ಮಾಡಿರುವ ದಿ. ಪಿ. ಸುಬ್ರಾಯ ಭಟ್ಟ ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಅಭಿವೃದ್ಧಿಗಾಗಿ ದುಡಿದ ಮಹಾನ್ ಚೇತನ ಇವರಾಗಿದ್ದಾರೆ. ಪಳ್ಳತ್ತಡ್ಕ ಇವರ ಹುಟ್ಟೂರು. ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ವಿದ್ಯಾಲಯದಲ್ಲಿ 1943ರಲ್ಲಿ ಕನ್ನಡ ವಿದ್ವಾನ್ ಪದವಿ ಪಡೆದು ನಂತರ ಉದ್ಯೋಗಕ್ಕಾಗಿ ತಿರುಪತಿಯಲ್ಲಿ ಪ್ರಾಚೀನ ತಾಳೆಯೋಲೆ ಗ್ರಂಥಪ್ರತಿ ಮಾಡುವ ಕೆಲಸಕ್ಕೆ ಸೇರ್ಪಡೆಗೊಂಡು, ಜತೆಗೆ ಪ್ರಾಚೀನ ಲಿಪಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು. ನಂತರ ಮದರಾಸು ವಿಶ್ವ ವಿದ್ಯಾಲಯದಲ್ಲಿ ಖಾಸಗಿಯಾಗಿ ಪದವಿ ವ್ಯಾಸಂಗ ಪೂರೈಸಿ, ಕನ್ನಡ ಸ್ನಾತಕೋತ್ತರ ಪದವಿ ನಡೆಯುತ್ತಿದ್ದ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.
             1956ರಲ್ಲಿ ಭಾಷಾವಾರು ಪ್ರಾಂತ ರಚನೆಯಾಗುತ್ತಿದ್ದಂತೆ ಕಾಸರಗೋಡು ಕೇರಳಕ್ಕೆ ಸೇರ್ಪಡೆಗೊಂಡು, 1957ರಲ್ಲಿ ಕಾಸರಗೋಡಿನಲ್ಲಿ ಸರ್ಕಾರಿ ಕಾಲೇಜು ಆರಂಭಕ್ಕೆ ಕಾರಣವಾಯಿತು. ಈ ಸಂದರ್ಭ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಪಿ. ಸುಬ್ರಾಯ ಭಟ್ ನೇಮಕಗೊಂಡು, ಅಲ್ಲಿ ಕನ್ನಡ ವಿಭಾಗದ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಮಡಿದ್ದರು. 1963ರಲ್ಲಿ ಇವರ ಕಾಲಾವಧಿಯಲ್ಲಿ ಪದವಿ ತರಗತಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಐಚ್ಛಿಕವಾಗಿ ಕಲಿಸುವ ಸವಲತ್ತು ಕನ್ನಡ ವಿಭಾಗಕ್ಕೆ ಪ್ರಾಪ್ತಿಯಾಗಿತ್ತು.  ಇದೇ ಜಾಕಾವಧಿಯಲ್ಲಿ ಕಾಲೇಜಿಗೆ ಮತ್ತೊಬ್ಬ ಮಹಾನ್ ವ್ಯಕ್ತಿತ್ವ ಬಿ.ಕೆ ತಿಮ್ಮಪ್ಪ ಉಪನ್ಯಾಸಕರಾಗಿ ಸೇರ್ಪಡೆಗೊಂಡಿದ್ದು, ಸುಬ್ರಾಯ ಭಟ್ಟರ ಕನ್ನಡ ಕೆಲಸಗಳಿಗೆ ಮತ್ತಷ್ಟು ಸ್ಪೂರ್ತಿ ತಂದುಕೊಟ್ಟಿದ್ದರು. ಸುಬ್ರಾಯ ಭಟ್ಟ ಅವರು ಮಾಜಿ ಶಾಸಕ, ವಕೀಲ ಕಳ್ಳಿಗೆ ಮಹಾಬಲ ಭಂಡಾರಿ, ಶ್ರೀಧರ ಕಕ್ಕಿಲ್ಲಾಯ, ಯು.ಪಿ ಕುಣಿಕುಳ್ಳಾಯ, ಕ್ಯಾಪ್ಟನ್ ಕೆ.ಎ ಶೆಟ್ಟಿ, ಖಂಡಿಗೆ ಶ್ಯಾಂ ಭಟ್ ಅವರ ಒಡನಾಡಿಯಾಗಿದ್ದರು.  ಉಪನ್ಯಾಸಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಬಡ್ತಿಗೊಂಡ ಸುಬ್ರಾಯ ಭಟ್ಟರು 1977 ಮಾ. 31ಕ್ಕೆ ಸೇವೆಯಿಂದ ನಿವೃತ್ತರಾಗುವವರಿದ್ದರು. ಆದರೆ ಸ್ಕೂಟರ್ ಅಪಘಾತವೊಂದರಲ್ಲಿ ಅಬೋಧಾವಸ್ಥೆಗೆ ಜಾರಿದ ಸುಬ್ರಾಯ ಭಟ್ಟರು 1976ರ ಆಗಸ್ಟ್ 29ರಂದು ಇಹಲೋಕ ತ್ಯಜಿಸಿದ್ದರು.
                               26ರಂದು ನೂರರ ಜನ್ಮದಿನ:
             ದಿ.ಪಿ.ಸುಬ್ರಾಯ ಭಟ್ಟ ಅವರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸಹಯೋಗದೊಂದಿಗೆ ಫೆ. 26ರಂದು ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ದಿ. ಪಿ. ಸುಬ್ರಾಯ ಭಟ್ಟ ಜನ್ಮಶತಮಾನೋತ್ಸವ ಕಾರ್ಯಕ್ರಮ ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಸಮಾರಂಭ ಉದ್ಘಾಟಿಸುವರು. ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ. ರೆಮಾ ಕೆ. ಅಧ್ಯಕ್ಷತೆ ವಹಿಸುವರು. ಬೆಳಗ್ಗಿಂದ ಸಂಜೆ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಮರಣ ನುಡಿನಮನ, ವಿವಿಧ ಗೋಷ್ಠಿ, ಸಾಕ್ಷ್ಯಚಿತ್ರ ಪ್ರದರ್ಶನ, ಸಮಾರೋಪ ಸಮಾರಂಭ ನಡೆಯಲಿರುವುದು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries