ಕೂದಲು ಉದುರುವುದು... ಈ ಸಮಸ್ಯೆ ಶೇ. 90ರಷ್ಟು ಪುರುಷರನ್ನು ಕಾಡುತ್ತಿದೆ. ಕೆಲವರಿಗಂತೂ 25 ವರ್ಷಕ್ಕೆಲ್ಲಾ ಬಕ್ಕತಲೆ ಸಮಸ್ಯೆ ಬರುತ್ತಿದೆ. ಅನೇಕ ಕರಣಗಳಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಅದರಲ್ಲಿ ಸಕ್ಕರೆ ಹಾಕಿದ ಜ್ಯೂಸ್‌ಗಳನ್ನು ಕುಡಿಯುವುದರಿಂದ ಕೂಡ ಕೂದಲು ಉದುರುವುದು.
ಸಕ್ಕರೆ ಹಾಕಿದ ಪಾನೀಯಗಳನ್ನು ಬಳಸುವುದರಿಂದ ಜ್ಯೂಸ್ ಮಾತ್ರವಲ್ಲ ಟೀ, ಕಾಫಿ ಕೂಡ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿಸುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:
ಮೆಡಿಕಲ್ ನ್ಯೂಸ್ ವರದಿ ಪ್ರಕಾರ ಕೂದಲಿನ ಆರೋಗ್ಯದಲ್ಲಿ ಆಹಾರಕ್ರಮ ಹಾಗೂ ಪೋಷಕಾಂಶ
ತುಂಬಾನೇ ಪ್ರಭಾವ ಬೀರುತ್ತದೆ. ಅದರಲ್ಲಿ ಸಕ್ಕರೆ ಹಾಕಿರುವ ಪಾನೀಯಗಳನ್ನು ಬಳಸುವುದರಿಂದ
ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು
ಈ ಬಗೆಯ ಪಾನೀಯಗಳು ಕೂದಲು ಉದುರುವ ಸಮಸ್ಯೆ ಹೆಚ್ಚಾಗಿಸುವುದು ಎಂದು ಅಧ್ಯಯನ ವರದಿ ಹೇಳಿದೆ
* ಸಿಹಿ ಪಾನೀಯಗಳು
* ಸಾಫ್ಟ್ ಡ್ರಿಂಕ್ಸ್
* ಎನರ್ಜಿ ಮತ್ತು ಸ್ಪೋರ್ಟ್ಸ್ ಡ್ರಿಂಕ್ಸ್
* ಹಾಲಿಗೆ ಸಕ್ಕರೆ ಹಾಕಿ ಕುಡಿಯುವುದು
* ಟೀ ಮತ್ತು ಕಾಫಿಗೆ ಸಕ್ಕರೆ ಹಾಕಿ ಕುಡಿಯುವುದು
ಅದರ ಜೊತೆಗೆ ಪುರುಷರಲ್ಲಿ ತಲೆ ಕೂದಲು ಉದುರಲು ಈ ಅಂಶಗಳು ಕೂಡ ಕಾರಣಗಳಾಗಿವೆ:
* ವಯಸ್ಸಾಗುತ್ತಿದ್ದಂತೆ
* ತುಂಬಾ ಧೂಮಪಾನ
* ದೈಹಿಕ ಚಟುವಟಿಕೆ ಇಲ್ಲದಿರುವುದು
* ಕುಟುಂಬದ ಇತಿಹಾಸ (ಮನೆಯಲ್ಲಿ ಅಪ್ಪ, ಅಜ್ಜನಿಗೆ ಬಕ್ಕತಲೆ ಉಂಟಾಗಿದ್ದರೆ)
* ಕೂದಲಿನ ಆರೈಕೆ ಮಾಡದಿರುವುದು
ಈ ಕಾರಣಗಳಿಂದ ಕೂದಲು ಉದುರುವುದು
ಅತ್ಯಧಿಕ ಮಾನಸಿಕ ಒತ್ತಡ: ಅತ್ಯಧಿಕ ಮಾನಸಿಕ ಒತ್ತಡವಿದ್ದರೆ ಪುರುಷ ಹಾಗೂ ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ಉಂಟಾಗುವುದು.
ಕಳಪೆ ಆಹಾರಕ್ರಮ: ಕಳಪೆ ಆಹಾರಕ್ರಮದಿಂದ ಕೂಡ ಕೂದಲಿನ ಬುಡಕ್ಕೆ ಸರಿಯಾದ ಪೋಷಕಾಂಶ ದೊರೆಯದೆ ಕೂದಲಿನ ಬುಡ ಸಡಿಲವಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುವುದು.
ಆರೋಗ್ಯ ಸಮಸ್ಯೆ
ರಕ್ತ ತೆಳ್ಳಗಾಗುವುದು, ಅತ್ಯಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ, ಕ್ಯಾನ್ಸರ್‌ಗೆ ಚಿಕಿತ್ಸೆ ಈ ಬಗೆಯ ಸಮಸ್ಯೆ ಇದ್ದರೆ ಕೂದಲು ಉದುರುವುದು.
ಹೇರ್ ಕೇರ್ ಪ್ರಾಡೆಕ್ಟ್
ಅಧಿಕ ರಾಸಾಯನಿಕವಿರುವ ಹೇರ್ ಕೇರ್ ಪ್ರಾಡೆಕ್ಟ್‌ಗಳನ್ನು ಬಳಸುವುದರಿಂದ ಅಥವಾ ಕೂದಲಿಗೆ ಬಣ್ಣ ಹಾಕುವುದರಿಂದ ಕೂದಲು ಉದುರುವುದು
ಈ ಬಗೆಯ ಆಹಾರಗಳು ಬಕ್ಕತಲೆ ಉಂಟಾಗುವುದನ್ನು ತಡೆಗಟ್ಟುವುದು
* ಮೊಟ್ಟೆ
* ಕ್ಯಾರೆಟ್
* ಪಾಲಾಕ್
* ಪ್ಲಮ್
* ಸಿಹಿ ಗೆಣಸು
* ಹಾಲಿನ ಉತ್ಪನ್ನಗಳು
* ಬೆಣ್ಣೆ ಹಣ್ಣು
* ಸಿಹಿ ಕುಂಬಳಕಾಯಿ ಬೀಜ
* ಬೀನ್ಸ್
* ಮಾಂಸಾಹಾರ
* ಧಾನ್ಯಗಳು, ಚೆನ್ನಾ
* ಕಿವಿಹಣ್ಣು
* ಬ್ಲ್ಯಾಕ್ ಬೀನ್ಸ್ ಅಥವಾ ರಾಜ್ಮಾ
ಕೂದಲು ಉದುರುವುದನ್ನು ತಡೆಗಟ್ಟಲು ಬಾಹ್ಯ ಆರೈಕೆ
ಕೂದಲು ಉದುರುವುದನ್ನು ತಡೆಗಟ್ಟಲು ಈ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು
* ಹರಳೆಣ್ಣೆ: ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದು ಕೂದಲನ್ನು ಮಂದವಾಗಿಸುತ್ತದೆ ಜೊತೆಗೆ ಕೂದಲು ಬೇಗನೆ ಬೆಳ್ಳಗಾಗುವುದನ್ನು ತಡೆಗಟ್ಟುತ್ತದೆ.
* ಈರುಳ್ಳಿ ಎಣ್ಣೆ: ಕೂದಲು ಉದುರುವುದನ್ನು ತಡೆಗಟ್ಟಲು ಕೂದಲಿನ ಎಣ್ಣೆ ತುಂಬಾ ಪ್ರಯೋಜನಕಾರಿ.
* ತೆಂಗಿನೆಣ್ಣೆ: ತೆಂಗಿನೆಣ್ಣೆ ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು, ತೆಂಗಿನೆಣ್ಣೆಗೆ ಕರಿಬೇವು ಹಾಗೂ ದಾಸವಾಳ ಹಾಕಿ ಕುದಿಸಿ ಆ ಎಣ್ಣೆ ಬಳಸಿದರೆ ಕೂದಲು ಉದುರುವುದು.
* ನೆಲ್ಲಿಕಾಯಿ: ಕೂದಲು ಉದುರುವುದನ್ನು ತಡೆಗಟ್ಟಲು ನೆಲ್ಲಿಕಾಯಿ ಎಣ್ಣೆ ಕೂಡ ಪ್ರಯೋಜನಕಾರಿ. ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನುವುದು ಕೂಡ ಒಳ್ಳೆಯದು.
ಕೂದಲು ಉದುರುವುದನ್ನು ತಡೆಗಟ್ಟಲು ಈ ಸಪ್ಲಿಮೆಂಟ್ಸ್ ಒಳ್ಳೆಯದು
* ವಿಟಮಿನ್ ಬಿ: ವಿಟಮಿನ್ ಬಿ12 ಕೊರತೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು
* ವಿಟಮಿನ್ ಸಿ: ವಿಟಮಿನ್ ಸಿ ಸಪ್ಲಿಮೆಂಟ್ ತೆಗೆದುಕೊಳ್ಳಿ
* ವಿಟಮಿನ್ ಡಿ: ವಿಟಮಿನ್ ಡಿಗೆ ಬಿಸಿಲಿನಲ್ಲಿ ನಿಂತುಕೊಳ್ಳಿ, ಜೊತೆಗೆ ವಿಟಮಿನ್ ಡಿ ಕೊರತೆಯಾದರೆ ಸಪ್ಲಿಮೆಂಟ್ ತೆಗೆದುಕೊಳ್ಳಿ
* ಕಬ್ಬಿಣ: ಕೂದಲಿನ ಬುಡ ಬಲವಾಗಲು ಕಬ್ಬಿಣದಂಶ ತುಂಬಾ ಮುಖ್ಯ.
* ಸತು: ಸತುವಿನಂಶ ಕೊರತೆಯಿಂದ ಕೂದಲು ಉದುರುವುದು.
ಸೂಚನೆ: ನೀವು ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಬೇಕು.