ಕಾಸರಗೋಡು: ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವ ನೀಡುತ್ತಿದ್ದ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ತೊಡದುಹಾಕುವಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ವಿವಿಧ ಸಮುದಾಯ ಸಂಘಟನೆಗಳ ಪ್ರತಿನಿಧಿ ಸಭೆ ಉದ್ಘಾಟಿಸಿ ಮಾತನಾಡಿದರು.
ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತರಿಗೆ ಮೂಲಭೂತ ಹಕ್ಕುಗಳಿವೆ ಎಂದು ಹೇಳುತ್ತಿದ್ದ ಯುಪಿಎ ಸರ್ಕಾರಕ್ಕಿಂತ ಭಿನ್ನವಾಗಿ, ಇಂದು ಭಾರತವು ಎಲ್ಲಾ ಜನರ ಕಲ್ಯಾಣವನ್ನು ಖಾತ್ರಿಪಡಿಸುವ ಸರ್ಕಾವನ್ನು ಎನ್‍ಡಿಎ ಮುನ್ನಡೆಸುತ್ತಿದೆ.
ಇಂದು ಭಾರತದ ಯಾವೊಬ್ಬ ಪ್ರಜೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬಹುದಾಗಿದೆ. ಇಂದು ಭಾರತೀಯ ಸೇನೆಯು ಭಯೋತ್ಪಾದಕರು ಮತ್ತು ಶತ್ರು ಸೈನಿಕರನ್ನು ಒಂದರಿಂದ ಹತ್ತರ ಅನುಪಾತದಲ್ಲಿ ನಾಶಪಡಿಸುವ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಗಳಿಸಿದೆ. ಲಸಿಕೆಗಾಗಿ ಹೊರ ದೇಶಗಳತ್ತ ಮುಖ ಮಾಡುವ ಪರಿಸ್ಥಿತಿ ಬದಲಾಗಿದೆ ಎಂದು ತಿಳಿಸಿದರು.
ಕೇರಳದ ಏಳಿಗೆ ಸಾಧ್ಯವಾಗಬೇಕಾದರೆ ರಾಷ್ಟ್ರೀಯತೆಯನ್ನು ಬೆಂಬಲಿಸುವ ಮುಖ್ಯಮಂತ್ರಿಯ ಅಗತ್ಯವಿದೆ. ಕೇರಳದಲ್ಲಿ ಬಿಜೆಪಿಗಾಗಿ ಹಲವು ಕಾರ್ಯಕರ್ತರು ಬಲಿದಾನ ನೀಡಿದ್ದಾರೆ. ಅಭಿವೃದ್ಧಿ ಹಾಗೂ ಜನಕಲ್ಯಾಣ ನೀತಿಗಳೆರಡನ್ನೂ ತನ್ನ ನೀತಿಯಾಗಿ ಅಳವಡಿಸಿಕೊಂಡಿರುವ ಬಿಜೆಪಿಯನ್ನು ಬೆಂಬಲಿಸಲು ಎಲ್ಲರೂ ಸಿದ್ಧರಾಗಬೇಕು ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್, ಕಾರ್ಯದರ್ಶಿಗಳಾದ ವಕೀಲ ಕೆ.ಪಿ.ಪ್ರಕಾಶ್ ಬಾಬು ಮತ್ತು ವಕೀಲ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಮನುಲಾಲ್ ಮೇಲೆತ್ ಸ್ವಾಗತಿಸಿ, ಜ.ಕಾರ್ಯದರ್ಶಿ ವಿಜಯ್ ಕುಮಾರ ರೈ ವಂದಿಸಿದರು.
ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದ ಜನನಾಯಕ ಮೋದಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್
0
ಫೆಬ್ರವರಿ 22, 2023
Tags