ಕಾಸರಗೋಡು: ಪ್ರಗತಿಶೀಲ ಸಮಾಜಕ್ಕಾಗಿ ಜೈಲುಗಳನ್ನು ಆಧುನಿಕ ರೀತಿಯಲ್ಲಿ ನವೀಕರಿಸುವುದು ಇಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಸೋಮವಾರ ಚೀಮೇನಿ ತೆರೆದ ಕಾರಾಗೃಹ ಮತ್ತು ಸುಧಾರಣಾ ಗೃಹದ ಕೈದಿಗಳಿಗೆ ಹೊಸ ಬ್ಯಾರಕ್‍ನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜೈಲು ವ್ಯವಸ್ಥೆಯಿಂದ ಉದ್ದೇಶಿತ ಪರಿಹಾರ ಪ್ರಕ್ರಿಯೆ, ಸಾಮಾಜೀಕರಣ ಮತ್ತು ಪುನರ್ವಸತಿಯನ್ನು ಸಾಧಿಸಲು ಹೆಚ್ಚಿನ ಕೈದಿಗಳನ್ನು ತೆರೆದ ಕಾರಾಗೃಹಗಳಲ್ಲಿ ಇರಿಸಲು ಸರ್ಕಾರ ನಿರ್ಧರಿಸಿದೆ. ಇಂದು ಕೇರಳದ ಜೈಲುಗಳು ಕೇವಲ ಅಪರಾಧಿಗಳನ್ನು ಇರಿಸುವ ಸ್ಥಳಗಳಲ್ಲ. ಇಲ್ಲಿ ಕೈದಿಗಳ ಮನಪರಿವರ್ತನೆ ಮತ್ತು ಅವರಲ್ಲಿ ಸಮಗ್ರ ಸುಧಾರಣೆ ನಡೆಯುತ್ತದೆ ಎಂದು ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್ ಶಾಸಕ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾಗವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ನಿರ್ಮಾಣ ವಿಭಾಗದ ಕಾರ್ಯಪಾಲಕ ಅಭಿಯಂತ ಮಹಮ್ಮದ್ ಮುನೀರ್ ವರದಿ ವಾಚಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ, ನೀಲೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಮುಂತಾದವರು ಉಪಸ್ಥಿತರಿದ್ದರು.
ಹೊಸ ಬ್ಯಾರಕ್‍ಗಳು ಎರಡು ಮಹಡಿಗಳಲ್ಲಿ 18417 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು 104 ಕೈದಿಗಳಿಗೆ ಅವಕಾಶ ಕಲ್ಪಿಸುತ್ತದೆ. ಹೊಸ ಬ್ಯಾರಕ್‍ಗಳು ಎರಡು ಅಂತಸ್ತು ಹೊಂದಿದ್ದು, 18,417 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 104 ಕೈದಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುತ್ತದೆ. ಚಿಮೆನಿ ತೆರೆದ ಜೈಲು ಕೇರಳದ ಎರಡನೇ ತೆರೆದ ಜೈಲು ಆಗಿದ್ದು, 2007 ರಲ್ಲಿ ಸ್ಥಾಪನೆಗೊಂಡಿದೆ. 308 ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಜೈಲು ಪ್ರಸಕ್ತ 3 ಬ್ಯಾರಕ್‍ಗಳಲ್ಲಿ 166 ಕೈದಿಗಳನ್ನು ಹೊಂದಿದೆ.