ವಿಶ್ವಸಂಸ್ಥೆ: ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ (ಯುಎನ್‌ಜಿಎ) ಪ್ರಸ್ತಾಪಿಸಿದ್ದಕ್ಕೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತವು, 'ಪಾಕಿಸ್ತಾನವು ನೆರೆಯ ರಾಜ್ಯದ ಮೇಲೆ ಸಂಘಟಿತವಾಗಿ ದ್ವೇಷ ಸಾಧಿಸುತ್ತಿದೆ' ಎಂದು ಆರೋಪಿಸಿದೆ.
'ಪಾಕಿಸ್ತಾನವು ಪದೇ ಪದೇ ಭಾರತದ ಬಗ್ಗೆ ಸುಳ್ಳು ಹೇಳುತ್ತಿದೆ' ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಕೌನ್ಸೆಲರ್ ರಾಜೇಶ್ ಪರಿಹಾರ್ ಹೇಳಿದ್ದಾರೆ.
'ನನ್ನ ದೇಶದ ವಿರುದ್ಧ ಪಾಕಿಸ್ತಾನ ಪ್ರತಿನಿಧಿ ಮಾಡಿರುವ ಕ್ಷುಲ್ಲಕ ಟೀಕೆಗಳಿಗೆ ಪ್ರತಿಕ್ರಿಯಿಸದೇ ಇರಲು ಸಾಧ್ಯವಿಲ್ಲ ಮತ್ತು ಪದೇ ಪದೇ ಸುಳ್ಳು ಹೇಳುವ ಅವರ ಮನಸ್ಥಿತಿಗೆ ಸಹಾನುಭೂತಿ ಇದೆ' ಎಂದಿದ್ದಾರೆ.
'ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ' ಎಂದಿದ್ದಾರೆ.