ಕಾಸರಗೋಡು: ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆ ಎಸ್‍ಎಫ್‍ಐ ನಡೆಸಿದ ಪ್ರತಿಭಟನೆಗೆ ಮಣಿದು ಸರ್ಕಾರ ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಎಂ. ರಮಾ ಅವರನ್ನು ಕೊನೆಗೂ ಎತ್ತಂಗಡಿ ಮಾಡಿದೆ. ತೆರವಾಗಿರುವ ಪ್ರಾಂಶುಪಾಲ ಸ್ಥಾನವನ್ನು ಕಾಲೇಜಿನ ಜಿಯೋಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಎ.ಎನ್ ಅನಂತಪದ್ಮನಾಭ ಅವರಿಗೆ ವಹಿಸಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಾಲೇಜಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಪ್ರಂಶುಪಾಲರ ಕೊಠಡಿಗೆ ಆಗಮಿಸಿದ ಎಸ್‍ಎಫ್‍ಐ ವಿದ್ಯಾರ್ಥಿಗಳೊಂದಿಗೆ ಅನಾಗರಿಕ ವರ್ತನೆ ತೋರಿರುವುದಲ್ಲದೆ, ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ ಕೂಡಿಹಾಕಿ ಹೊರಗಿಂದ ಬೀಗ ಜಡಿದಿರುವುದಾಗಿಯೂ ಆರೋಪಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಎರಡು ದಿವಸಗಳಿಂದ ಎಸ್‍ಎಫ್‍ಐ ವಿದ್ಯಾರ್ಥಿ ಸಂಘಟನೆ ಕಾಲೇಜಿನಲ್ಲಿ ಮುಷ್ಕರ ಹೂಡಿದ್ದು, ಪ್ರಾಂಶುಪಾಲೆ ಕೊಠಡಿಯೆದುರು ಪ್ರತಿಭಟನೆ ನಡೆಸಿದ್ದರು. ಇದರ ಮಧ್ಯೆಯೇ ಪ್ರಾಂಶುಪಾಲರು ತಮ್ಮ ಕರ್ತವ್ಯ ಮುಮದುವರಿಸಿದ್ದರು. ಪ್ರಾಂಶುಪಾಲರನ್ನು ಆ ಸ್ಥಾನದಿಂದ ತೆರವುಗೊಳಿಸುವ ವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂಬ ಬಿಗಿ ನಿಲುವು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪ್ರಾಂಶುಪಾಲರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಸರ್ಕಾರ-ಪ್ರಾಂಶುಪಾಲೆಗೆ ಸ್ಥಾನಪಲ್ಲಟ
0
ಫೆಬ್ರವರಿ 24, 2023
Tags