ಕುಂಬಳೆ: ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ಧರ್ಮನೇಮ ಫೆ. 26ರಿಂದ 28ರ ವರೆಗೆ ಜರುಗಲಿದೆ. 26ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ 7ರಿಂದ ಭಜನೆ, 27ರಂದು ಬೆಳಗ್ಗೆ 11ಕ್ಕೆ ದೀಪಾರಾಧನೆ, ಪೂಜೆ, ಮಧ್ಯಾಹ್ನ 2ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 7ಕ್ಕೆ ತೊಡಙಲ್, ರಾತ್ರಿ 10ಕ್ಕೆ ಧಾರ್ಮಿಕ ಸಭೆ, 11ರಿಂದ ತುಳುವೆರೆ ಉಡಲ್ ಜೋಡುಕಲ್ಲು ಅವರಿಂದ 'ತುಂಗ ಭದ್ರ'ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು. 28ರಂದು ಮಧ್ಯಾಹ್ನ 2ಗಂಟೆಗೆ ದೀಪಾರಾಧನೆ, ಸಂಜೆ 4ಕ್ಕೆ ರಾಜಂದೈವ ಶ್ರೀ ಧೂಮವತೀ ದೈವದ ಧರ್ಮ ನೇಮ ಆರಂಭಗೊಳ್ಳುವುದು.
ಇಂದಿನಿಂದ ಪುತ್ತೂರುಕೊಟ್ಯ ಶ್ರೀ ಧೂಮಾವತೀ ಧರ್ಮನೇಮ
0
ಫೆಬ್ರವರಿ 25, 2023
Tags