ಕಾಸರಗೋಡು: ರಾಜಕೀಯ ಘರ್ಷಣೆಗೆ ಕಾರಣವಾಗಿರುವ ಪೆರಿಯ ಕಲ್ಯೋಟ್ ಪ್ರದೇಶದಲ್ಲಿ ಅವಳಿ ಕೊಲೆ ನಡೆದ ವರ್ಷಾಚರಣೆ ಮೊದಲ ದಿನ ಯುವಕಾಂಗ್ರೆಸ್ ನೇತಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ತಂಡ ನಡೆಸಿದ ಹಲ್ಲೆಯಿಂದ ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಾಲೋಂಚುಳ್ಳಿ ನಿವಾಸಿ ಮಾರ್ಟಿನ್ ಜಾರ್ಜ್(30)ಗಂಭೀರಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ತಡರಾತ್ರಿ ರಾಜಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಎರುಮಕುಳಂ ಎಂಬಲ್ಲಿ ತಂಡ ಇವರನ್ನು ಮಾರಕಾಯುಧದಿಂದ ಹಲ್ಲೆ ನಡೆಸಿದೆ. ಕಲ್ಯೋಟ್ ಅವಳಿ ಕೊಲೆ ನಡೆದ ವರ್ಷಾಚರಣೆ ಶುಕ್ರವಾರ ಆಯೋಜಿಸಲಾಗಿತ್ತು. ಇದರ ಪೂರ್ವಭಾವಿಯಾಗಿ ಗುರುವಾರ ಚಾಲಿಂಗಾಲ್‍ನಿಂದ ಕಲ್ಯೋಟ್ ವರೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಇದರಲ್ಲಿ ಪಾಲ್ಗೊಂಡ ನಂತರ ರಂಜಿತ್ ಎಂಬವರೊಂದಿಗೆ ಬೈಕಲ್ಲಿ ತೆರಳುವ ಹಾದಿಮಧ್ಯೆ ಮರ್ಟಿನ್‍ಜಾರ್ಜ್ ಅವರ ಬೈಕ್ ತಡೆದು, ಬೈಕಿಗೆ ಬಿಗಿದಿದ್ದ ಪಕ್ಷದ ಧ್ವಜ ಕಿತ್ತೆಸೆದುಗಂಭೀರವಾಗಿ ಹಲ್ಲೆ ನಡೆಸಿದೆ. ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್ ದೂರಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಞÂಕಣ್ಣನ್, ರಆಹುಲ್, ದುರ್ಗಾರಾಜನ್ ಸೇರಿದಂತೆ ಒಂಬತ್ತು ಜನರ ವಿರುದ್ಧ ರಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಯೂತ್ ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ-ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು
0
ಫೆಬ್ರವರಿ 17, 2023
Tags