ಬದಿಯಡ್ಕ: ನೀರ್ಚಾಲು ಸಮೀಪದ ನಿಡುಗಳ ಅಗ್ರಸಾಲೆ ಶ್ರೀ ಶಾಸ್ತಾರ ಪಂಜಿಕಲ್ಲು ಶ್ರೀ ಧೂಮಾವತಿ ಮತ್ತು ಇತರ ದೈವಗಳ ಸೇವಾಸಮಿತಿಯ ಶ್ರೀ ದೈವಗಳ ವಾರ್ಷಿಕ ಉತ್ಸವ ಧರ್ಮನೇಮ ಭಾನುವಾರ ನಡೆಯಿತು. ಶುಕ್ರವಾರ ಸಂಜೆ ಶ್ರೀ ಧೂಮಾವತಿ ದೈವದ ಕೋಲ, ಭಾನುವಾರ ಶ್ರೀ ರಾಜದೈವದ ಕೋಲ, ಪ್ರಸಾದ ವಿತರಣೆ ನಡೆಯಿತು.
ಫೆ.18ರಂದು ಶನಿವಾರ ಮಧ್ಯಾಹ್ನ ಶ್ರೀ ಶಾಸ್ತಾರ ಪೂಜೆ, ಶ್ರೀಶಂಕರನಾರಾಯಣ ಪೂಜೆ, ಮಧ್ಯಾಹ್ನ ಧರ್ಮಸಮಾರಾಧನೆ, ರಾತ್ರಿ 7 ಕ್ಕೆ ಶ್ರೀ ದೈವಗಳ ಭಂಡಾರ ಚಾವಡಿಯಿಂದ ಹೊರಟು ಕುದುರೆಬಳ್ಳಿಗೆ ಬರುವುದು ಮತ್ತು ಉತ್ಸವ ಪ್ರಾರಂಭ. ಫೆ.19ರಂದು ಭಾನುವಾರ ಬೆಳಗ್ಗೆ 6ರಿಂದ ಪೂಮಾಣಿ ಕಿನ್ನಿಮಾಣಿ ದೈವಗಳ ನೇಮ, 9 ಕ್ಕೆ ಕಣಿಯಾಟಿ ದೈವದ ಕೋಲ, ಮಧ್ಯಾಹ್ನ 11.30ರಿಂದ ಶ್ರೀ ಧೂಮಾವತೀ ದೈವದ ಕೋಲ, ಅಪರಾಹ್ನ 2.30ರಿಂದ ಶ್ರೀ ರಾಜದೈವದ ಕೋಲ, ಪರಿವಾರ ದೈವಗಳ ಕೋಲ, ಪ್ರಸಾದ ವಿತರಣೆ ನಡೆಯಲಿದೆ. ಫೆ.20ರಂದು ಸೋಮವಾರ ಬೆಳಗ್ಗೆ 7 ರಿಂದ ಕಿಳಿಂಗಾರು ಗುತ್ತಿನಡಿಯಲ್ಲಿ ದೈವಗಳ ನೇಮ, ಕೋಲಗಳು ನಡೆಯಲಿದೆ.
ನಿಡುಗಳ ಅಗ್ರಸಾಲೆ ವಾರ್ಷಿಕೋತ್ಸವ, ಧರ್ಮನೇಮ
0
ಫೆಬ್ರವರಿ 14, 2023
Tags