ಕಾಸರಗೋಡು: ವಿವೇಕಾನಂದ ನಗರ ರೆಸಿಡೆನ್ಸ್ ಅಸೋಸಿಯೇಶನ್ ಕುಟುಂಬ ಸಂಗಮ ಮತ್ತು ಮಹಾಸಭೆ ವಿವೆಕಾನಂದ ನಗರ ಕ್ರೀಡಾಂಗಣದಲ್ಲಿ ಜರುಗಿತು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಸಮಾರಂಭ ಉದ್ಘಾಟಿಸಿದರು.
ಅಸೋಸಿಯೇಶನ್ ಅಧ್ಯಕ್ಷ ಕೆ.ವಿ ಕೋಮನ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಪಂ ಸದಸ್ಯೆ ಜನನಿ ಉಪಸ್ಥಿತರಿದ್ದರು. ಈ ಸಂದರ್ಭ ಕುಟುಂಬ ಸದಸ್ಯರಿಗಾಗಿ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸಂಜೆ ನಡೆದ ಸಮಾರಂಭದಲ್ಲಿ ಅಸೋಸಿಯೇಶನ್‍ನ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಇಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಸೋಸಿಯೇಶನ್ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಂ. ಮಹೇಶ್ ಅಧ್ಯಕ್ಷ, ಎ.ಶಶಿಕಲಾ ಉಪಾಧ್ಯಕ್ಷೆ, ಬಿ.ಗುರುದತ್ತ ಪೈ ಕಾರ್ಯದರ್ಶಿ, ಆರ್. ರೂಪಕಲಾ ಜತೆಕಾರ್ಯದರ್ಶಿ, ಸುನಿಲ್‍ಕುಮಾರ್ ಕೋಶಾಧಿಕಾರಿ, ದೇವದಾಸ್ ಪಾರೆಕಟ್ಟ ಮತ್ತು ರಘುನಂದನ್ ಲೆಕ್ಕಪರಿಶೋಧಕರು ಹಾಗೂ ಗೋಪಾಲಕೃಷ್ಣ, ಸುಜಿತ್, ಶ್ರೀಕೃಷ್ಣ, ವಿದ್ಯಾಶಂಕರಿ, ಪ್ರಸನ್ನನ್, ಹರೀಶ್ಚಂದ್ರ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕೂಡ್ಲು ವಿವೇಕಾನಂದನಗರ ರೆಸಿಡೆನ್ಸಿ ಅಸೋಸಿಯೇಶನ್ ಕುಟುಂಬ ಸಂಗಮ
0
ಫೆಬ್ರವರಿ 28, 2023