ಕೊಚ್ಚಿ: ಪಾಪಿ ಪತಿರಾಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಮೃತದೇಹದೊಂದಿಗೆ ಸಂಭೋಗ ನಡೆಸಿರುವ ಭೀಕರ ಘಟನೆ ಕೇರಳದ ಕಾಲಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹೇಶ್ ಕುಮಾರ್ (38) ಬಂಧಿತ ಆರೋಪಿ. ಶವದ ಮೇಲೆ ಸಿಕ್ಕ ಮತ್ತೊಂದು ದೇಹದ ದ್ರವದ ಆಧಾರದ ಮೇಲೆ ಮಹೇಶ್ ಕೊಲೆ ಮಾಡಿದ್ದಾನೆಂದು ಪತ್ತೆಹಚ್ಚಲಾಗಿದೆ.
ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಅಲ್ಲದೆ, ಲೈಂಗಿಕ ಕ್ರಿಯೆ ನಡೆಸಿರುವ ಬಗ್ಗೆ ಸಾಕ್ಷಿಯು ಲಭ್ಯವಾಗಿದೆ. ಆದರೆ, ಕೊಲೆಗೂ ಮುಂಚೆಯೋ ಅಥವಾ ಕೊಲೆ ನಂತರವೋ? ಎಂಬುದು ದೃಢವಾಗಿಲ್ಲ. ಆದರೆ, ಕೊಲೆ ಮಾಡಿದ ಬಳಿಕ ಸಂಭೋಗ ನಡೆಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿದೆ.
ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿ ಮಹೇಶ್, ಕಾಲಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದರೆ, ಇದಕ್ಕೂ ಮುನ್ನವೇ ಆತ ಪತ್ನಿಯನ್ನು ಕೊಲೆ ಮಾಡಿದ್ದ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾಪತ್ತೆ ನಾಟಕವಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹೇಶ್ ಮನೆಯನ್ನು ಶೋಧಿಸಿದಾಗ, ಹತ್ತಿರದ ತೋಟದಲ್ಲೇ ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಮಹಿಳೆಯ ದೇಹವನ್ನು ಪತ್ತೆ ಹಚ್ಚಿದರು. ಅದು ಮಹೇಶ್, ಪತ್ನಿಯದ್ದೇ ಎಂಬುದು ಖಚಿತವಾಯಿತು.
ಬಳಿಕ ಮಹೇಶ್ ಮೇಲೆಯೇ ಅನುಮಾನಗೊಂಡ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ತಪ್ಪನ್ನು ಆತ ಒಪ್ಪಿಕೊಂಡಿದ್ದಾನೆ. ಶವದ ಮೇಲಿದ್ದ ದ್ರವವು ಕೂಡ ಮಹೇಶನೇ ಆರೋಪಿ ಎಂಬುದನ್ನು ಸಾಬೀತು ಮಾಡಿದೆ. ನೆರೆಮನೆಯವನ ಜೊತೆ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಿಂದ ಈ ಕೃತ್ಯ ಮಾಡಿದೆ ಎಂದು ಹೇಳಿದ್ದಾರೆ. ಅಕ್ರಮ ಸಂಬಂಧ ಬಗ್ಗೆ ನನ್ನ ಸಹೋದರ ಮತ್ತು ನಾನು ಎಚ್ಚರಿಕೆ ನೀಡಿದರೂ ಆಕೆ ಅದನ್ನು ಮುಂದುವರಿಸಿದ್ದಳು. ಅಲ್ಲದೆ, ತನ್ನ ಲವರ್ನೊಂದಿಗೆ ಹೋಗುವುದಾಗಿ ಆಕೆ ಹೇಳಿದಳು. ಇದರಿಂದ ಆಕ್ರೋಶಗೊಂಡು ಕೊಲೆ ಮಾಡಿದೆ ಎಂದು ಮಹೇಶ್ ಒಪ್ಪಿಕೊಂಡಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದೆ.