ಮಂಜೇಶ್ವರ: ದೇವಂದಪಡ್ಪ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರದ
ವಿಜ್ಞಾಪನಾ ಪತ್ರಿಕೆಯನ್ನು ನಿನ್ನೆ ಶ್ರೀ ಕೊಂಡೆವೂರು ಸನನಿಧಿಯಲ್ಲಿ ಶ್ರೀಯೋಗಾನಂದ ಸರಸ್ವತಿ ಶ್ರೀಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳು ದೇವರ ಅನುಗ್ರಹದಿಂದ ಆದಷ್ಟು ಬೇಗ ನೆರವೇರಿ ಅಷ್ಟಬಂಧ ಬ್ರಹ್ಮಕಲಶ ನಡೆಯಲಿ ಶ್ರೀಗಳು ಶುಭಾಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಮಹಾವಿಷ್ಣು ದೇವಸ್ಥಾನ ಜೀರ್ಣದ್ಧಾರ ಸಮಿತಿಯ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಸಮಿತಿಯ ಪದಾಧಿಕರಿಗಳಾದ ಪ್ರೇಮಾನಂದ ರೈ ನೆತ್ತಿಲ ಕೋಡಿ, ಸೀನ ಶೆಟ್ಟಿ ಕೆದಂಬಾಡಿ, ಐತಪ್ಪ ಶೆಟ್ಟಿ ದೇವಂದಪಡ್ಪ್ಪು, ರವಿ ಮುಡಿಮಾರ್, ಸತೀಶ್ ಶೆಟ್ಟಿ ನೆತ್ತಿಲ ಕೆಳಗಿನ ಮನೆ, ಯತಿರಾಜ್ ಶೆಟ್ಟಿ ಕೆದಂಬಾಡಿ, ಮಾಧವ ಪೂಜಾರಿ ಕುದ್ಕೊರಿ, ಶ್ಯಾಮ್ ರಾಜ್ ಶೆಟ್ಟಿ ನೆತ್ತಿಲ, ಗಂಗಾಧರ ಶೆಟ್ಟಿ ನೆತ್ತಿಲ ಕೋಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನ ಜೀರ್ಣೋದ್ದಾರ: ವಿಜ್ಞಾಪನಾ ಪತ್ರ ಬಿಡುಗಡೆ
0
ಫೆಬ್ರವರಿ 12, 2023