ಇಂಫಾಲ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಮಣಿಪುರದ ಇಂಫಾಲ್‌ನ ಫ್ಯಾಶನ್ ಶೋ ಸ್ಥಳದ ಸಮೀಪದಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ.
ಇಂಫಾಲ್‌ನ ಹಟ್ಟ ಕಂಜೇಲ್‌ಬಂಗ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಯಾರಿಗೂ ಗಾಯಗಳಾದ ಬಗ್ಗೆ ವರದಿ ಬಂದಿಲ್ಲ. ಫ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಶನಿವಾರ ಸ್ಫೋಟ ಸಂಭವಿಸಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಸಹ ಭಾಗವಹಿಸಬೇಕಿತ್ತು.