ಕಾಂತಿಯುತ ತ್ವಚೆಗೆ ದಿನನಿತ್ಯ ನೂರಾರು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಅವುಗಳಲ್ಲಿ ಕೆಲವೊಂದು ಫಲಿತಾಂಶ ಕೊಟ್ಟರೆ, ಇನ್ನೂ ಕೆಲವು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ.
ಆದರೆ ಇಂದು ನಾವು ಕಾಂತಿಯುತ ತ್ವಚೆಗಾಗಿ ಹೇಳುವ ಈ ಒಂದು ಪದಾರ್ಥ ನಿಮಗೆ ನಿರೀಕ್ಷಿತ ಫಲಿತಾಂಶ ಕೊಡುವುದರಲ್ಲಿ ಸಂದೇಹವಿಲ್ಲ. ಅಂತಹ ಒಂದು ವಸ್ತುವೆಂದರೆ ಎಂದರೆ ಬೀಟ್ರೂಟ್.
ಆರೋಗ್ಯಕ್ಕೆ ಉತ್ತಮವಾಗಿರುವ ಬೀಟ್ರೂಟ್ ನಿಮ್ಮ ತ್ವಚೆಗೂ ಬಹಳ ಪ್ರಯೋಜನಕಾರಿ. ಅದರಲ್ಲಿರುವ ಪೋಷಕಾಂಶಗಳು ನಿಮ್ಮ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಿ, ಕೋಮಲ ತ್ವಚೆ ನೀಡುತ್ತದೆ.
ಹಾಗಾದರೆ, ಬೀಟ್ರೂಟ್‌ನಿಂದ ಮಾಡಿಕೊಳ್ಳಬಹುದಾದ ಫೇಸ್ ಪ್ಯಾಕ್ ಅಥವಾ ಮಾಸ್ಕ್‌ಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ತ್ವಚೆಗೆ ಬೀಟ್ರೂಟ್ ಪ್ರಯೋಜನಗಳು ಹೀಗಿವೆ:
ಬೀಟ್ರೂಟ್ ವಿಟಮಿನ್ ಸಿ, ಫೈಬರ್, ಕಬ್ಬಿಣ, ಕ್ಯಾರೊಟಿನಾಯ್ಡ್‌ಗಳು, ಪೊಟ್ಯಾಸಿಯಮ್, ವಿಟಮಿನ್ ಬಿ9 (ಫೋಲೇಟ್), ಮ್ಯಾಂಗನೀಸ್, ಎಲೆಕ್ಟ್ರೋಲೈಟ್‌ಗಳು ಮತ್ತು ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಅದು ಈ ಕೆಳಗಿನ ಪ್ರಯೋಜನಗಳನ್ನು ನೀಡುವುದು.
ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ
ಉರಿಯೂತ ನಿವಾರಕ ಮತ್ತು ಚರ್ಮದ ನೋಟವನ್ನು ಸುಧಾರಿಸಿವುದು
ತ್ವಚೆಯನ್ನು ತೇವಾಂಶದಿಂದ ಇಡುತ್ತದೆ
ಡಾರ್ಕ್ ಸರ್ಕಲ್ ಕಡಿಮೆ ಮಾಡುತ್ತದೆ
ಚರ್ಮದ ಟೋನ್ ಸಮಗೊಳಿಸುತ್ತದೆ
ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಚರ್ಮವನ್ನು ಕಾಂತಿಯುತವಾಗಿಸುತ್ತದೆ
ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ
ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ತೆಗೆದುಹಾಕುತ್ತದೆ
ಕೂದಲಿಗೆ ಹೊಳಪು ಮತ್ತು ಶಕ್ತಿಯನ್ನು ನೀಡುತ್ತದೆ
ತುಟಿಗಳನ್ನು ಎಫ್ಫೋಲಿಯೇಟ್ ಮತ್ತು ಅವುಗಳಿಗೆ ಸುಂದರವಾದ ಗುಲಾಬಿ ಬಣ್ಣವನ್ನು ನೀಡುತ್ತದೆ.
ಹೊಳೆಯುವ ತ್ವಚೆಗಾಗಿ 5 ತ್ವರಿತ DIY ಬೀಟ್‌ರೂಟ್ ಫೇಸ್ ಮಾಸ್ಕ್‌ಗಳು ಇಲ್ಲಿವೆ:
1. ಬೀಟ್ರೂಟ್ ಮತ್ತು ಕ್ಯಾರೆಟ್ ಫೇಸ್ ಮಾಸ್ಕ್:
ಈ ಪ್ಯಾಕ್ ತ್ವಚೆಯನ್ನು ಕೋಮಲಗೊಳಿಸಿ, ಕೆಲವೇ ವಾರಗಳಲ್ಲಿ ನಿಮಗೆಗುಲಾಬಿಯಂತಹ ಹೊಳಪನ್ನು ನೀಡುತ್ತದೆ.
ಬಳಸುವ ವಿಧಾನ:
ಬೀಟ್ರೂಟ್ ರಸ ಮತ್ತು ಕ್ಯಾರೆಟ್ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ.
ಈ ಮಿಶ್ರಣವನ್ನು ಐಸ್ ಕ್ಯೂಬ್ ಬಾಕ್ಸ್‌ಗೆ ಹಾಕಿ, ಫ್ರೀಜ್ ಮಾಡಿ.
ಪ್ರತಿದಿನ ಬೆಳಿಗ್ಗೆ, ತ್ವಚೆಯ ಮೇಲೆ ಈ ಐಸ್ ಕ್ಯೂಬ್ ಅನ್ನು ಉಜ್ಜಿ ಮತ್ತು 10-15 ನಿಮಿಷಗಳ ಕಾಲ ಬಿಡಿ.
ಉಗುರುಬೆಚ್ಚಗಿನ ನೀರಿನಿಂದ ತೊಳೆದು, ಮೃದುವಾದ ಮಾಯಿಶ್ಚರೈಸರ್ ಹಚ್ಚಿ.