ಕಾಸರಗೋಡು: ರಾಜ್ಯ ಸರ್ಕಾರದ ಸಾರ್ವಜನಿಕ ವಲಯ ಸಂಸ್ಥೆಯಾದ ಹೋರ್ಟಿಕಾರ್ಪ್ ಫ್ರಾಂಚೈಸಿ ವ್ಯವಸ್ಥೆಯಲ್ಲಿ ಗ್ರಾಮಶ್ರೀ ಹೋರ್ಟಿ ಸ್ಟೋರ್ ಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ತರಕಾರಿ, ಹಣ್ಣುಗಳ ಹೊರತಾಗಿ ಇತರ ಸಾರ್ವಜನಿಕ ವಲಯದ ಸಂಸ್ಥೆಗಳು, ಕುಟುಂಬಶ್ರೀ, ಫಾರ್ಮರ್ಸ್ ಫಾರ್ಮರ್ ಪೆÇ್ರೀಡ್ಯೂಸರ್ ಕಂಪನಿ, ಕೃಷಿ ಒಕ್ಕೂಟ, ಸಹಕಾರಿ ಸಂಸ್ಥೆಗಳ ಉತ್ಪನ್ನಗಳು ಸಹ ಹೋರ್ಟಿಸ್ಟೋರ್‍ನಲ್ಲಿ ಲಭ್ಯವಿರಲಿದೆ. ಸ್ಟೋರ್ ಕನಿಷ್ಠ 100 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಭದ್ರತಾ ಠೇವಣಿಯಾಗಿ ರೂ.25,000 ಪಾವತಿಸಬೇಕು. ಹೋರ್ಟಿಕಾರ್ಪ್ ನಿರ್ದೇಶಿಸುವ ಮಾದರಿಯಲ್ಲಿ ಸ್ಟೋರ್‍ಗಳ ವ್ಯವಸ್ಥೆ ಮಾಡಬೇಕಾಗಿದೆ. ಆಸಕ್ತ ಉದ್ಯಮಿಗಳು, ವ್ಯವಸ್ಥಾಪಕ ನಿರ್ದೇಶಕರು, ಹಾರ್ಟಿಕಾರ್ಪ್, ಉದಯಗಿರಿ,ಪೂಜಾಪ್ಪುರ ಪಿ.ಓ, ತಿರುವನಂತಪುರಂ-695012 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0471 2359651, 9447625776)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೋರ್ಟಿಕಾರ್ಪ್ ಫ್ರಾಂಚೈಸಿ ಮೂಲಕ ಹೋರ್ಟಿಸ್ಟೊರ್ ಆರಂಭಕ್ಕೆ ಅರ್ಜಿ ಆಹ್ವಾನ
0
ಫೆಬ್ರವರಿ 20, 2023
Tags