ಕಾಸರಗೋಡು: ಬಿಎಂಎಸ್ ಕಾರ್ಯಕರ್ತ, ಅಣಂಗೂರು ಜೆ.ಪಿ ಕಾಲನಿ ನಿವಾಸಿ ಜ್ಯೋತಿಷ್ ಅವರ ಪ್ರಥಮ ಸಂಸ್ಮರಣಾ ಸಮಾರಂಭ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ವಠಾರದಲ್ಲಿ ಜರುಗಿತು. ಬಿಎಂಎಸ್ ಕಾಸರಗೋಡು ವಲಯ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜ್ಯೋತಿಷ್ ಅವರ ತಂದೆ ಗೋಪಾಲಕೃಷ್ಣ ಹಾಗೂ ತಾಯಿ ಪುಷ್ಪಾವತೀ ಜ್ಯೋತಿಷ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಈ ಸಂದರ್ಭ ನಡೆದ ಸಂಸ್ಮರಣಾ ಸಮಾರಂಭದಲ್ಲಿ ಆರೆಸ್ಸೆಸ್ ಜಿಲ್ಲಾ ಸಹ ಕಾರ್ಯವಾಹ ಪವಿತ್ರನ್ ಕೆ.ಕೆ ಪುರಂ, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ವಕೀಲ, ಪಿ. ಮುರಳೀಧರನ್, ಜಿಲ್ಲಾ ಸಮಿತಿ ಜತೆಕಾರ್ಯದರ್ಶಿ ಕೆ.ವಿ ಬಾಬು, ರಾಜ್ಯ ಸಂಘಟನಾ ಕಾರ್ಯದರ್ಶಿ ಗಳಾದ ಕೆ. ಮಹೇಶ್, ಹರೀಶ್ ಕುದ್ರೆಪ್ಪಾಡಿ, ಅನಿಲ್ ಬಿ.ನಾಯರ್, ವಾಗೀಶ್ ಬಿ, ಎನ್. ಅಜೀಶ್, ಗುರುದಾಸ್, ಸುರೇಶ್, ವಿಶ್ವನಾಥ ಶೆಟ್ಟಿ, ದಿನೇಶ್ ಸಂಸ್ಮರಣಾ ಭಾಷಣ ಮಾಡಿದರು. ಜ್ಯೋತಿಷ್ ಪ್ರಥಮ ಚರಮವಾರ್ಷಿಕ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ರೋಗಿಗಳಿಗೆ ಮಧ್ಯಾಹ್ನದ ಊಟ ವಿತರಿಸಲಾಯಿತು.
ಜ್ಯೋತಿಷ್ ಪ್ರಥಮ ಸಂಸ್ಮರಣಾ ಕಾರ್ಯಕ್ರಮ, ರೋಗಿಗಳಿಗೆ ಮಧ್ಯಾಹ್ನದೂಟ ವಿತರಣೆ
0
ಫೆಬ್ರವರಿ 16, 2023
Tags