ಬದಿಯಡ್ಕ: ಕುಂಬ್ಡಾಜೆ ಪಂಚಾಯಿತಿಯ ಬೆಳಿಂಜ ಬದರ್ ಜುಮಾ ಮಸೀದಿ ಸಮಿತಿಯ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಇ.ಕೆ ಮತ್ತು ಎಪಿ ವಿಭಾಗಗಳ ಮಧ್ಯೆ ಹೊಡೆದಾಟ ನಡೆದಿದೆ. ಎಪಿ ವಿಭಾಗದ, ಪತ್ರಕರ್ತರೂ ಆಗಿರುವ ಎನ್.ಕೆ.ಎಂ ಬೆಳಿಂಜ, ಕಾರ್ಯಕರ್ತರಾದ ಮಹಮ್ಮದ್ ಅಕ್ಕರ, ಸುಬೈರ್, ಇ.ಕೆ ವಿಭಾಗದ ಬೆಂಬಲಿಗ ಹಾಗೂ ಮಸೀದಿ ಸಮಿತಿ ಅಧ್ಯಕ್ಷ ಜಿ.ಬಿ ಅಬ್ದುಲ್ಲ, ಅಬ್ದುಲ್ ರಹಮಾನ್ ನಾರಂಪಾಡಿ, ಲತೀಫ್, ಚಂಬ್ರಂಚಾಲ್ ಕರೀಂ, ಅಬ್ದುಲ್ಲ ನೆಲ್ಲಿತ್ತಡ್ಕ ಗಾಯಾಳುಗಳು.
ಮಸೀದಿಯಲ್ಲಿ ಪ್ರಾರ್ಥನೆ ನಂತರ ಮಖಾಂ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತರುವ ಮಧ್ಯೆ ಹೊಡೆದಾಟ ನಡೆದಿತ್ತೆನ್ನಲಾಗಿದೆ. ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಘಟನೆಯನ್ನು ಕುಂಬಳೆ ಪ್ರೆಸ್ ಪೋರಂ ಖಂಡಿಸಿ ಪೋಲೀಸ್ ತನಿಖೆಗೆ ಆಗ್ರಹಿಸಿದೆ.
ಬೆಳಿಂಜ ಮಸೀದಿಯಲ್ಲಿ ಘರ್ಷಣೆ-ಎಂಟು ಮಂದಿಗೆ ಗಾಯ
0
ಫೆಬ್ರವರಿ 25, 2023