ಕಾಸರಗೋಡು: ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ಭಾರತೀಯ ವನ್ಯಜೀವಿ ಟ್ರಸ್ಟ್ ಜಂಟಿಯಾಗಿ ದೈತ್ಯ ಸಮುದ್ರ ಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿಯನ್ನು ನಡೆಸಿತು.
ಕಾಸರಗೋಡು ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್ ಉದ್ಘಾಟಿಸಿದರು. ಸಮುದ್ರದಲ್ಲಿನ ಅತಿಯಾದ ತ್ಯಾಜ್ಯ, ಹವಾಮಾನ ವೈಪರೀತ್ಯ ಹಾಗೂ ಅನಿಯಂತ್ರಿತ ಮೀನುಗಾರಿಕೆಯಿಂದ ಸಾಗರದ ದೈತ್ಯರಾದ ಡಾಲ್ಫಿನ್, ತಿಮಿಂಗಿಲ, ಶಾರ್ಕ್, ಕಡಲಾಮೆಗಳ ಉಳಿವಿಗೆ ಧಕ್ಕೆ ಉಂಟಾಗುತ್ತಿದ್ದು, ಇದಕ್ಕಾಗಿ ಕರಾವಳಿಯ ಮೀನುಗಾರಿಕಾ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಅಕ್ವಾಟಿಕ್ ಮೆಡಿಸಿನ್ ತಜ್ಞೆ ಡಾ.ನೇಹಾ ಶಾ ಮುಂಬೈ ತರಬೇತಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಜಿಲ್ಲೆಯ ಕರಾವಳಿ ಪಶು ಸಂರಕ್ಷಣಾ ಇಲಾಖೆಯ ಆಯ್ದ ಪಶು ವೈದ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ನೌಕರರಿಗೆ ತರಬೇತಿ ನೀಡಲಾಯಿತು. ವನ್ಯಜೀವಿ ಭಾರತ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎನ್.ವಿ.ಕೆ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್ ಮಾತನಾಡಿದರು. ಸಾಗರ ಪ್ರಾಜೆಕ್ಟ್ ಹೆಡ್ ಸಾಜೆರ್ಂಟ್ ಜಾನ್ ಸ್ವಾಗತಿಸಿ, ರೇಂಜ್ ಫಾರೆಸ್ಟ್ ಆಫೀಸರ್ ಕೆ.ವಿ. ಅರುಣೇಶ್ ವಂದಿಸಿದರು.
ದೈತ್ಯ ಸಮುದ್ರ ಜೀವಿಗಳ ಸಂರಕ್ಷಣೆ ಮಹತ್ವದ್ದು: ವಿಚಾರ ಸಂಕಿರಣದಲ್ಲಿ ಸಂದೇಶ
0
ಫೆಬ್ರವರಿ 17, 2023