ನವದೆಹಲಿ: ಅಫ್ಗಾನಿಸ್ತಾನಕ್ಕೆ ಪಲಾಯನ ಮಾಡಲು ಯೋಜಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿ ಮೊಹದ್ ಆರಿಫ್ ಮತ್ತು ಮಹಾರಾಷ್ಟ್ರದ ಹಮ್‌ರಾಜ್ ವರ್ಷಿದ್ ಶೇಕ್ ಬಂಧಿತರು.
ದೇಶದಲ್ಲಿ ಆಲ್-ಖೈದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಕರನ್ನು ಪ್ರಜೋದಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಥಣಿಸಂದ್ರ ಮತ್ತು ಮಹಾರಾಷ್ಟ್ರದ ಪಾಲ್ಘರ್-ಥಾಣೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳು ಇಬ್ಬರನ್ನು ಶನಿವಾರ ವಿಚಾರಣೆಗೆ ಕರೆದೊಯ್ದಿದ್ದರು.
ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸಂಯೋಜಿತವಾಗಿರುವ ವಿದೇಶಿ ಮೂಲದ ನಿರ್ವಾಹಕರೊಂದಿಗೆ ಆನ್‌ಲೈನ್ ಸಂಪರ್ಕ ಹೊಂದಿದ್ದರು ಎಂದು ತನಿಖಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.