ಕಾಸರಗೋಡು: ಬದಿಯಡ್ಕದ ಡಾ. ಮಾಲಿನಿ ಸರಳಯ ಸ್ಮರಣಾರ್ಥ, ಡಾ. ಶ್ರೀನಿಧಿ ಕ್ಲಿನಿಕ್ ಬದಿಯಡ್ಕ ಮತ್ತು ಕೆಎಂಸಿ ಆಸ್ಪತ್ರೆ ಮಂಗಳೂರು ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಬದಿಯಡ್ಕ ದಲ್ಲಿ ನಡೆಯಿತು.
ಕೆಎಂಸಿ ಆಸ್ಪತ್ರೆ ಯ ಕ್ಯಾನರ್ ತಜ್ಞರಾದ ಡಾ. ಬ್ಯಾನರ್ಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕ್ಯಾನ್ಸರ್ ಬಗ್ಗೆ ಮಾಹಿತಿ-ಅರಿವು ಕಾರ್ಯಕ್ರಮದಲ್ಲಿ ಡಾ. ರಾಬಿಯ ತರಗತಿ ನಡೆಸಿ ಕೊಟ್ಟರು. ಕೆಂಎಸಿ ಆಸ್ಪತ್ರೆ ಹಿರಿಯ ವೈದ್ಯರಾದ ಡಾ. ಕೀರ್ತನ್ ರಾವ್ (ಕಣ್ಣಿನ ವಿಭಾಗ), ಡಾ. ಭೂಷಣ್ ಶೆಟ್ಟಿ (ಕಿಡ್ನಿ ವಿಭಾಗ) ಮತ್ತು ಬದಿಯಡ್ಕದ ಡಾ. ಶ್ರೀನಿಧಿ ಸರಳಯ ಉಪಸ್ಥಿತರಿದ್ದರು.
ಶಿಬಿರದಲ್ಲಿ ಹೃದಯ ರೋಗ, ನರ ರೋಗ, ಎಲುಬು ಮತ್ತು ಮೂಳೆ, ಸಾಮಾನ್ಯ ರೋಗ, ಕಣ್ಣು, ಕಿವಿ ಮೂಗು ಗಂಟಲು, ಕ್ಯಾನ್ಸರ್, ಗ್ಯಾಸ್ಟ್ರಿಕ್ ರೋಗ ಮತ್ತು ಮಕ್ಕಳ ರೋಗ ತಪಾಸಣೆ ನಡೆಸಲಾಯಿತು. ಉಚಿತವಾಗಿ ಇಸಿಜಿ, ಮಧುಮೇಹ ತಪಾಸಣೆ ಹಾಗೂ ಔಷಧ ವಿತರಿಸಲಾಯಿತು. 300ಕ್ಕೂ ಹೆಚ್ಚುಮಂದಿ ಶಿಬಿರದ ಪ್ರಯೋಜನ ಪಡೆದುಕೊಮಡರು.
ಬದಿಯಡ್ಕದ ಡಾ. ಮಾಲಿನಿ ಸರಳಯ ಸ್ಮರಣಾರ್ಥ ಉಚಿತ ವೈದ್ಯಕೀಯ ಶಿಬಿರ
0
ಫೆಬ್ರವರಿ 19, 2023