ಕಾಸರಗೋಡು: ನಗರ ಪೋಲೀಸ್ ಠಾಣೆಯ ಎಸ್‍ಐ ಅವರ ಕಿವಿ ಕಚ್ಚಿದ ಯುವಕನನ್ನು ಬಂಧಿಸಲಾಗಿದೆ.
ಮಧೂರು ಅರಂತೋಡು ನಿವಾಸಿ ಸ್ಟಾನಿ ರೋಡ್ರಿಗಸ್ (48) ಬಂಧಿತ ಆರೋಪಿ.
ಎಸ್‍ಐ ಎಂವಿ ವಿಷ್ಣು ಪ್ರಸಾದ್ ಅವರ ಕಿವಿ ಕಚ್ಚಿದ್ದ. ಬಂಧಿತ ಆರೋಪಿಯನ್ನು ಪೋಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ಯುತ್ತಿದ್ದಾಗ ದಾಳಿ ನಡೆದಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ನೀಡಲಾಗಿದೆ.
ಎಸ್‍ಐ ನೇತೃತ್ವದ ಪೆÇಲೀಸ್ ತಂಡ ವಾರಂಟ್ ಶಂಕಿತನನ್ನು ಬಂಧಿಸಲು ತೆರಳಿತ್ತು. ಮಾರ್ಗಮಧ್ಯೆ ಉಳಿಯತ್ತಡ್ಕದಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ಸಮಸ್ಯೆ ಗಮನಕ್ಕೆ ಬಂದಿದೆ.
ಜನಸಂದಣಿಯನ್ನು ಕಂಡು ಜೀಪ್ ನಿಲ್ಲಿಸಿದಾಗ ಬೈಕ್ ಸವಾರ ಸ್ಟಾನಿ ರೋಡ್ರಿಗಸ್ ಗಾಂಜಾ ಸೇವಿಸಿ ರೋಡ್ ಶೋ ನಡೆಸುತ್ತಿರುವುದು ಗಮನಕ್ಕೆ ಕಂಡುಬಂತು. ಆತನ ಬೈಕ್ ಕಾರಿಗೆ ಡಿಕ್ಕಿ ಹೊಡೆದ ನಂತರ ಜನರು ಇಲ್ಲಿ ಜಮಾಯಿಸಿದರು.
ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ರೋಡ್ ಶೋ ನಡೆಸಿದ್ದ ಯುವಕನನ್ನು ಎಸ್‍ಐ ಕೇಳಿದ್ದಕ್ಕೆ ಆಕ್ರೋಶಗೊಂಡ ಎಸ್‍ಐ ಸಮವಸ್ತ್ರ ಹರಿದು ಹಾಕಿದ. ಪೆÇಲೀಸ್ ಪಡೆ ಸ್ಟಾನಿಯನ್ನು ಹಿಡಿದು ಜೀಪಿನಲ್ಲಿ ಕರೆದೊಯ್ಯುವಾಗ ಎಸ್‍ಐ ಕಿವಿಗೆ ಕಚ್ಚಿದ್ದ.
ಕಾಸರಗೋಡು ಎಸ್‍ಐ ಕಿವಿ ಕಚ್ಚಿದ ಆರೋಪಿ ಬಂಧನ
0
ಫೆಬ್ರವರಿ 05, 2023