ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ಮುಳಿಂಜ ಪರಿಸರದ ಭೀಫಾತಿಮ ಅವರ ಮನೆಯಲ್ಲಿ ‘ಕೋರ್ನರ್ ಪಿ.ಟಿ.ಎ’ ನಡೆಸಲಾಯಿತು. ಮಂಗಲ್ಪಾಡಿ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ ಮುಸ್ತಫಾ ಕಾರ್ಯಕ್ರಮ ಉದ್ಘಾಟಿಸಿ ಪ್ರಸ್ತುತ ಶಾಲಾ ಭೌತಿಕ ಸೌಕರ್ಯ ಹಾಗೂ ಹಿರಿಮೆಗಳನ್ನು ಶ್ಲಾಘಿಸಿ, ಊರಿನ ಮಕ್ಕಳನ್ನು ಊರಿನ ಶಾಲೆಗೆ ದಾಖಲಿಸಬೇಕೆಂದು ಸೂಚಿಸಿದರು.
ಶಾಲಾ ಪಿ.ಟಿ.ಎ ಅದ್ಯಕ್ಷ ಇಬ್ರಾಹಿಂ ಹನೀಫ್ ಪ್ರಸ್ತುತ ಶಾಲಾ ಸ್ಥಿತಿಗತಿಗಳನ್ನು ಅಭಿವೃಧ್ದಿಯನ್ನು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು. ಊರಿನ ಹಿರಿಯರಾದ ಮೂಸಾ ಅವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ ಹಿರಿಯ ಶಿಕ್ಷಕಿ ಅಬ್ಸ ಸುಳ್ಯಮೆ ವಂದಿಸಿದರು. ರಿಯಾಜ್ ಯಂ.ಎಸ್ ನಿರ್ವಹಿಸಿದರು. ಬಳಿಕ ಊರಿನ ಹೆತ್ತವರಿಗೆ ರಸಪ್ರಸ್ನೆಯನ್ನು ಶಾಲಾ ಶಿಕ್ಷಕ ಅಬ್ದುಲ್ ಬಶೀರ್ ಮತ್ತು ರೇವತಿ ಟೀಚರ್ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿನಿಯರ ಸಾಂಸ್ಕøತಿಕ ಕಾರ್ಯಕ್ರಮವನ್ನು ಫೀರೋಜ್ ಮಾಸ್ತರ್ ನಡೆಸಿಕೊಟ್ಟರು.
ಕೋರ್ನರ್ ಪಿ.ಟಿ.ಎ ನಡೆಸಿದ ಮುಳಿಂಜ ಶಾಲೆ
0
ಫೆಬ್ರವರಿ 16, 2023