ಕಾಸರಗೋಡು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ಮಾಹಿತಿ ಕಛೇರಿ ಕಾಸರಗೋಡು ನಡೆಸುವ ಕ್ಷೇತ್ರ ಪ್ರಚಾರ-ವೃತ್ತಿ ಮಾರ್ಗದರ್ಶನ ಚಟುವಟಿಕೆಗಳ ಅಂಗವಾಗಿ ವಿಡಿಯೋ- ಫೆÇೀಟೋಗ್ರಫಿಯನ್ನು ವೃತ್ತಿಯಾಗಿ ಸ್ವೀಕರಿಸುವವರಿಗಾಗಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.
ಫೆ. 21ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ವಿದ್ಯಾನಗರದ ಜಿಲ್ಲಾಧಿಕಾರಿ ಕಛೇರಿಯ ಬಳಿ ಇರುವ ಜಿಲ್ಲಾ ಮಾಹಿತಿ ಕಛೇರಿಯ ಪಿ ಆರ್ ಛೇಂಬರ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಮತ್ತು ಕೆಲಸದ ಅನುಭವದೊಮದಿಗೆ ಫೆಬ್ರವರಿ 17 ರ ಮೊದಲು ಜioಞsgಜ@gmಚಿiಟ.ಛಿom ಎಂಬ ಇಮೇಲ್ ವಿಳಾಸದಲ್ಲಿ ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿದ 40 ಜನರಿಗೆ ಪ್ರವೇಶ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ(04994 255145)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಮಾಹಿತಿ ಕಛೇರಿಯಲ್ಲಿ ವಿಡಿಯೋ-ಛಾಯಾಗ್ರಹಣ ಕಾರ್ಯಾಗಾರ
0
ಫೆಬ್ರವರಿ 14, 2023
Tags