ಕಾಸರಗೋಡು: ಸಮುದ್ರದಲ್ಲಿ ಮೀಗುಗಾರಿಕೆ ಮಧ್ಯೆ ಆಳೆತ್ತರದ ಅಲೆಗೆ ಸಿಲುಕಿ ನೀರಿಗೆ ಬಿದ್ದ ಮೂವರು ಕಾರ್ಮಿಕರನ್ನು ಅತಿ ಸಾಹಸದಿಂದ ರಕ್ಷಿಸಿದ ಕಾಸರಗೋಡಿನ ಬೇಕಲದ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಸನಿಹದ ಬಬೀಶ್ ಅವರನ್ನು ರಾಷ್ಟ್ರಪತಿಯ'ರಕ್ಷಾ ಕವಚ'ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ದೇಶದ ಒಟ್ಟು 15ಮಂದಿಯನ್ನು ರಕ್ಷಾ ಕವಚ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಕೇರಳದ ಇಬ್ಬರಲ್ಲಿ ಬಬೀಶ್ ಒಬ್ಬರಾಗಿದ್ದಾರೆ.
2021 ಆಗಸ್ಟ್ 21ರಂದು ಮೀನುಗಾರಿಕೆಗೆ ತೆರಳಿದ್ದ ದೋಣಿ ಅಪಾಯಕ್ಕೀಡಾಗಿದ್ದು, ಈ ಸಂದರ್ಭ ನೀರಲ್ಲಿ ಮುಳುಗೇಳುತ್ತಿದ್ದ ಮೂವರು ಕಾರ್ಮಿಕರನ್ನು ಬಬೀಶ್ ಅತ್ಯಂತ ಸಾಹಸಕರ ರೀತಿಯಲ್ಲಿ ದಡ ಸೇರಿಸಿದ್ದರು. ಬಬೀಶ್ ಅವರ ಸಾಹಕಸಕ್ಕಾಗಿ ಇವರನ್ನು ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಗೌರವಿಸಿತ್ತು. ನೀರಲ್ಲಿ ಮುಳುಗೇಳುತ್ತಿದ್ದ ಮೂವರು ಸಹೋದರರನ್ನು ಜೀವದ ಹಂಗು ತೊರೆದು ಪಾರಾಗಿಸಿದ್ದೇನೆ. ಇದು ಯಾವುದೇ ಪುರಸ್ಕಾರಕ್ಕಾಗಿ ನಡೆಸಿದ ಕೆಲಸವಲ್ಲ. ಅನಿರೀಕ್ಷಿತವಾಗಿ ಪುರಸ್ಕಾರ ಲಭಿಸಿದ್ದು, ಸಂತಸ ತಂದಿದೆ ಎಂದು ಬಬೀಶ್ ಪ್ರತಿಕ್ರಿಯಿಸಿದ್ದಾರೆ.
ಮೂವರ ಪ್ರಾಣ ರಕ್ಷಿಸಿದ ಕಾಸರಗೋಡಿನ ಯುವಕಗೆ ರಾಷ್ಟ್ರಪತಿಯ ರಕ್ಷಾ ಕವಚ ಪುರಸ್ಕಾರ
0
ಫೆಬ್ರವರಿ 14, 2023
Tags