ನವದೆಹಲಿ: ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದಲ್ಲಿರುವ ಹಲವು ದೇವಾಲಯಗಳಲ್ಲಿ ಬಳಸುತ್ತಿರುವ ಪೂಜಾ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಸುಪ್ರೀಂ ಕೋರ್ಟ್‍ಗೆ ವರದಿ ಸಲ್ಲಿಸಲಾಗಿದೆ.
ಕೃತಕ ಶ್ರೀಗಂಧ ಮತ್ತು ರಾಸಾಯನಿಕಗಳಿಂದ ತಯಾರಿಸಿದ ಭಸ್ಮವು ವಿಗ್ರಹಗಳನ್ನು ಹಾಳು ಮಾಡುತ್ತದೆ ಎಂದು ಭಕ್ತರು ದೂರಿದ್ದಾರೆ ಎಂದು ನ್ಯಾಯಮೂರ್ತಿ ಕೆಟಿ ಶಂಕರನ್ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸಾದವಾಗಿ ಅರಿಶಿನ, ರಾಮಚ್ಚ ಮತ್ತು ಶ್ರೀಗಂಧದ ಪುಡಿಯನ್ನು ನೀಡುವ ಬಗ್ಗೆಯೂ ಮಂಡಳಿಯು ಪರಿಗಣಿಸುವಂತೆ ವರದಿ ತಿಳಿಸಿದೆ.
ಮಂಡಳಿಯ ಕೆಲವು ದೇವಾಲಯಗಳಲ್ಲಿ ಮಾತ್ರ ಸಗಣಿಯಿಂದ ಮಾಡಿದ ಭಸ್ಮವನ್ನು ಬಳಸಲಾಗುತ್ತದೆ. ಹಣೆಗೆ ಶ್ರೀಗಂಧ, ಭಸ್ಮ ಇಟ್ಟುಕೊಳ್ಳುವವರಿಗೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ದೇವಸ್ಥಾನಗಳಲ್ಲಿ ಬಳಸುವ ಕಡಿಮೆ ಗುಣಮಟ್ಟದ ಕೃತಕ ಶ್ರೀಗಂಧವನ್ನು ತಮಿಳುನಾಡಿನಲ್ಲಿ ತಯಾರಿಸಲಾಗುತ್ತದೆ. ಅದರ ನಿರ್ಮಾಣಕ್ಕೆ ಬಳಸಲಾದ ಸಾಮಗ್ರಿಗಳು ಸಹ ತಿಳಿದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿಜವಾದ ಶ್ರೀಗಂಧದ ಬೆಲೆ ಹೆಚ್ಚಿರುವುದರಿಂದ ಕಡಿಮೆ ಗುಣಮಟ್ಟದ ಕೃತಕ ಶ್ರೀಗಂಧವನ್ನು ಬಳಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಶಂಕರನ್ ಅವರು ಗಮನ ಸೆಳೆದಿದ್ದಾರೆ.
ಮಂಡಳಿಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಹೊಸ ರೀತಿಯಲ್ಲಿ ಪ್ರಸಾದ ನೀಡುವ ಕುರಿತು ಚಿಂತನೆ ನಡೆಸಬೇಕು ಹಾಗೂ ಭಕ್ತರ ಹಣೆಗೆ ಅರಿಶಿನ, ರಾಮಚ್ಚ, ಶ್ರೀಗಂಧವನ್ನು ಅರೆದು ಪ್ರಸಾದ ನೀಡುವ ಬಗ್ಗೆ ಚರ್ಚಿಸಬೇಕು ಎಂದು ವರದಿಯಲ್ಲಿ ಕೋರಲಾಗಿದೆ. ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ ತಂತ್ರಿ ಮತ್ತು ಧಾರ್ಮಿಕ ವಿದ್ವಾಂಸರು ನಿರ್ಧರಿಸಬೇಕು.
ಗರ್ಭಗೃಹ ಮತ್ತು ಇತರ ವಿಗ್ರಗಳಿಗೆ ನಿಜವಾದ ಶ್ರೀಗಂಧವನ್ನು ಮಾತ್ರ ಬಳಸಬೇಕು. ಹಾಗಾಗಿ ನಿಜವಾದ ಶ್ರೀಗಂಧವನ್ನು ಬಳಸಿದರೆ, ಕಾಣಿಕೆ ಸಲ್ಲಿಸುವ ಭಕ್ತನಿಗೆ ಭಾರಿ ವೆಚ್ಚವಾಗುತ್ತದೆ. ಈ ಪರಿಸ್ಥಿತಿಯಲ್ಲಿ, ವರದಿಯ ಪ್ರಕಾರ, ಒಂದು ದಿನದಲ್ಲಿ ಹತ್ತರಿಂದ ಇಪ್ಪತ್ತು ಮಂದಿಗಳಿಂದ ಇತಹ ಪೂಜೆಗೆ ಅವಕಾಶಕ್ಕೆ ಪರಿಗಣಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ ದೇವಸ್ಥಾನಗಳಲ್ಲಿ ಗುಣಮಟ್ಟವಿಲ್ಲದ ಭಸ್ಮ, ಶ್ರೀಗಂಧಗಳ ಬಳಕೆ: ಸುಪ್ರೀಂ ಕೋರ್ಟ್‍ಗೆ ವರದಿ
0
ಫೆಬ್ರವರಿ 20, 2023