ತುಂಬಾ ಮಕ್ಕಳಲ್ಲಿ ಹುಳ ಹಲ್ಲಿನ ಸಮಸ್ಯೆ ಇರುತ್ತದೆ. ಕ್ಯಾಲ್ಸಿಯಂ ಕಡಿಮೆಯಾದಾಗ ಈ ಬಗೆಯ ಸಮಸ್ಯೆ ಉಂಟಾಗುತ್ತದೆ. ಮಕ್ಕಳಿಗೆ ಮೊದಲಿಗೆ ಬರುವ ಹಲ್ಲುಗಳು ಉದುರಿ ಹೋಗುವುದರಿಂದ ಹೆಚ್ಚಿನ ಪೋಷಕರು ಹುಳಳ ಹಲ್ಲಿನ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಹೇಗೋ ಈ ಹಲ್ಲು ಹೋಗಿ ಮತ್ತೊಂದು ಹಲ್ಲು ಬರುತ್ತದೆ ಎಂದು ಹುಳಸ ಹಲ್ಲಿನ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.
ಆದರೆ ಈ ಬಗೆಯ ಹುಳ ಹಲ್ಲು ಕೆಲವೊಮ್ಮೆ ತುಂಬಾ ನೋವುಂಟು ಮಾಡುತ್ತದೆ,ಕೆಲ ಮಕ್ಕಳ ಮುಖ ಊದಿ ಕೊಳ್ಳುತ್ತದೆ, ಹೀಗಾದಾಗ ದಂತವೈದ್ಯರ ಬಳಿ ಕರೆದುಕೊಂಡು ಹೋಗುತ್ತೇವೆ, ದಂತವೈದ್ಯರಲ್ಲಿ ಹುಳ ಹಲ್ಲಾದ ಕಾರಣ ರೂಟ್ ಕೆನಲ್ ಮಾಡಿಸುವಂತೆ ಸಲಹೆ ಕೊಡುವವರೇ ಹೆಚ್ಚು.
ಇನ್ನೇನು ಕೆಲವು ವರ್ಷಗಳಲ್ಲಿ ಬಿದ್ದು ಹೋಗುವಾಗ ಹಲ್ಲಿಗೆ ರುಟ್‌ಕೆನಾಲ್ ಅವಶ್ಯಕತೆ ಇದೆಯೇ? ರೂಟ್ ಕೆನಾಲ್ ಮಾಡಿಸಿದರೆ ಹಲ್ಲು ಸ್ವಾಭಾವಿಕವಾಗಿ ಬೀಳುವುದೇ ಅಥವಾ ವೈದ್ಯರ ಬಳಿ ಬಂದು ಹಲ್ಲು ತೆಗಿಸಬೇಕೆಂಬ ಎಂಬೆಲ್ಲಾ ಡೌಟ್‌ಗಳಿಗೆ ಈ ಲೇಖನದ ಮೂಲಕ ಉತ್ತರ ಕಂಡುಕೊಳ್ಳೋಣ:
ಮಕ್ಕಳಿಗೆ ರೂಟ್ ಕೆನಾಲ್ ಎಂದರೇನು?
ಹಲ್ಲು ತುಂಬಾ ಹುಳ ಆಗಿದ್ದು ಹಲ್ಲು ಸಂಪೂರ್ಣ ಹಾಳಾಗಿದೆ, ಈ ಹಲ್ಲು ಕೀಳಲೇ ಬೇಕು
ಇಲ್ಲದಿದ್ದರೆ ಬೇರೆ ಹಲ್ಲುಗಳು ಹಾಳಾಗುವುದು ಎಂದಾದರೆ ವೈದ್ಯರು ಆ ಹಲ್ಲನ್ನು ಕೀಳುವಂತೆ
ಸಲಹೆ ನೀಡುತ್ತಾರೆ. ಇಲ್ಲದಿದ್ದರೆ ವಸಡುಗಳಲ್ಲಿ ಕೀವು ತುಂಬುವುದು. ಈ ರೀತಿಯಾದಾಗ
ತುಂಬಾ ಹಲ್ಲುನೋವು ಉಂಟಾಗುವುದು, ಹೀಗಾದಾಗ ರೂಟ್ ಕೆನಾಲ್ ಮಾಡಿಸಿದರೆ ಸ್ವಲ್ಪ ಸಮಧಾನ
ಸಿಗುವುದು.
ಮಕ್ಕಳಿಗೆ ರೂಟ್ ಕೆನಾಲ್ ಒಳ್ಳೆಯದಾ?
ಹೆಚ್ಚಿನ ಪೋಷಕರು ಈ ಹಲ್ಲು ಬಿದ್ದು ಹೋಗುತ್ತದೆ ಅಲ್ವಾ, ಆದ್ದರಿಂದ ತೊಂದರೆಯಿಲ್ಲ ಎಂದೇ ಭಾವಿಸುತ್ತಾರೆ, ಆದರೆ ಹೀಗೆ ಮಾಡಿದರೆ ಹುಳು ಹಲ್ಲು ಬಿದ್ದೋಗಿ ಆ ಜಾಗದಲ್ಲಿ ಬರುವ ಹೊಸ ಹಲ್ಲುವಿನಲ್ಲೂ ತೊಂದರೆ ಉಂಟಾಗುವುದು, ಇದನ್ನು ತಡೆಗಟ್ಟಲು ರೂಟ್ ಕೆನಾಲ್ ಮಾಡಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಮಕ್ಕಳಿಗೆ ರೂಟ್ ಕೆನಾಲ್ ಮಾಡಿದರೆ ಅಡ್ಡಪರಿಣಾಮವೇನು?
* ಮಾತನಾಡಲು ತೊಂದರೆ
* ಆಹಾರ ಜಗಿಯಲು ತೊಂದರೆ
* ಹಲ್ಲುಗಳು ಸಮವಾಗಿ ಬರುವುದಿಲ್ಲ, ಓರೆಕೋರೆ ಬರುವುದು.
* ಹಲ್ಲಿನ ಮೇಲೆ ಹಲ್ಲು ಬರುವುದು
ರೂಟ್ ಕೆನಾಲ್ ಯಾವಾಗ ಮಾಡಿಸಬೇಕು?
ಮಗುವಿನ ಹಲ್ಲಿಗೆ ಸೋಂಕು ತಗುಲಿ ತುಂಬಾ ನೋವು ಇದ್ದರೆ ಮೊದಲಿಗೆ ಮಕ್ಕಳ ದಂತ ವೈದ್ಯರಿಗೆ ತೋರಿಸಿ.
* ಅವರು ಮಗುವಿನ ಹಲ್ಲು ಪರೀಕ್ಷಿಸಿದ ಬಳಿಕಮ ಕೆಲವೊಂದು ಸೂಚನೆ ನೀಡಿ ರೂಟ್ ಕೆನಾಲ್ ಬಗ್ಗೆ ಸಲಹೆ ನೀಡುತ್ತಾರೆ.
ರೂಟ್ ಕೆನಲ್ ಮಾಡಿಸಿದಾಗ ಮಕ್ಕಳಿಗೆ ಗಟ್ಟಿ ಆಹಾರ, ತುಂಬಾ ಬಿಸಿಯಾದ ಆಹಾರ ನೀಡಬಾರದು.
ದೊಡ್ಡವರ ರೂಟ್ ಕೆನಲ್ ಮಕ್ಕಳ ರೂಟ್ ಕೆನಾಲ್‌ನ ವ್ಯತ್ಯಾಸವೇನು?
ದೊಡ್ಡವರಿಗೆ ಮಾಡುವ ರೂಟ್ ಕೆನಾಲ್ ಹಾಗೂ ಮಕ್ಕಳ ರೂಟ್ ಕೆನಾಲ್ ಸುಮಾರು ಒಂದೇ ರೀತಿ
ಇರುತ್ತದೆ. ಸೀಲೆಂಟ್‌ನಲ್ಲಿ ಮಾತ್ರ ವ್ಯತ್ಯಾಸ. ಮಕ್ಕಳಿಗೆ ಮಾಡುವ ರೂಟ್
ಕೆನಾಲ್‌ನಲ್ಲಿ ಬಳಸುವ ಸೀಲೆಂಟ್ ಕರಗುವಂಥದ್ದು, ಇದರಿಮದ ಮಗುವಿನ ಹಲ್ಲು ಬೀಳುವಾಗ ಏನೂ
ತೊಂದರೆಯಾಗುವುದಿಲ್ಲ ಅಲ್ಲದೆ ಹೊಸ ಹಲ್ಲಿಗೂ ಅಡಚಣೆ ಉಂಟಾಗುವುದಿಲ್ಲ.