ಕಾಸರಗೋಡು: ಪ್ರಾಚಾರ್ಯ ದಿ. ಪಿ. ಸುಬ್ರಾಯ ಭಟ್ಟರ ಜನ್ಮಶತಮಾನೋತ್ಸವ ಸಮಾರಂಭವು ಫೆಬ್ರವರಿ 26ರಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿದ ಕನ್ನಡ ಅಧ್ಯಾಪಕರ ಮತ್ತು Pನ್ನಡ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳ ವಿವಿಧ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಪುಸ್ತಕ ಮಾರಾಟ ಮಾಡಲು ಉದ್ದೇಶಿಸುವವರು ತಮ್ಮ ಪುಸ್ತಕದಮುಖಬೆಲೆಯ 40% ರಿಯಾಯಿತಿ ದರದಲ್ಲಿ ಕಾರ್ಯಕ್ರಮದ ದಿವಸ ಮಾರಾಟ ಮಾಡಬಹುದೆಂದು ಸುಬ್ರಾಯ ಭಟ್‍ಜನ್ಮಶತಮಾನೋತ್ಸವ ಸಮಿತಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಸಮಿತಿಯ ಸಂಚಾಲಕಿ ಲಕ್ಷ್ಮಿ.ಕೆ (ದೂರವಾಣಿ: 9656656508) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸುಬ್ರಾಯ ಭಟ್ ಜನ್ಮ ಶತಮಾನೋತ್ಸವ-ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ
0
ಫೆಬ್ರವರಿ 14, 2023