HEALTH TIPS

ಲೈಂಗಿಕ ದೌರ್ಜನ್ಯ:ಆದೇಶದಲ್ಲಿ ಸಂತ್ರಸ್ತೆ ಹೆಸರು ತೆಗೆಯಲು ಸುಪ್ರೀಂ ಕೋರ್ಟ್ ಸೂಚನೆ

 

            ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ಹೆಸರನ್ನು ತನ್ನ ಆದೇಶದಿಂದ ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

                  ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ನ್ಯಾಯಪೀಠವು, 'ಮದ್ರಾಸ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಂತ್ರಸ್ತೆಯ ಹೆಸರನ್ನು ಒಂದಲ್ಲ ಹಲವು ಬಾರಿ ಸೇರಿಸಿದೆ ಎಂಬುದನ್ನು ನಾವು ಗಮನಿಸಿದ್ದೇವೆ.

ಇದನ್ನು ಸರಿಪಡಿಸಿ, ಬಳಿಕ ಆದೇಶವನ್ನು ಅಪ್ಲೋಡ್ ಮಾಡಬೇಕು ಎಂದು ನಾವು ಹೈಕೋರ್ಟ್‌ಗೆ ನಿರ್ದೇಶನ ನೀಡುತ್ತಿದ್ದೇವೆ' ಎಂದು ಹೇಳಿದೆ.

                  'ಅಪ್ರಾಪ್ತ ವಯಸ್ಸಿನವಳಾದ ನಾನು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಆರೋಪಿಯೊದಿಗೆ ಸಂಬಂಧ ಹೊಂದಿದ್ದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮದ್ರಾಸ್ ಹೈಕೋರ್ಟ್ ಆರೋಪಿಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಾಗ ತಪ್ಪೆಸಗಿದೆ. ಆದೇಶದಲ್ಲಿ ನನ್ನ ಹೆಸರನ್ನು ಪದೇಪದೇ ಪ್ರಸ್ತಾಪಿಸಿದೆ' ಎಂಬುದಾಗಿ ಸಂತ್ರಸ್ತೆಯು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.

                  'ಅಪರಾಧವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆ ಮತ್ತು ವಸ್ತುಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳಿಗೆ ಅವಕಾಶವಿತ್ತು ಎಂಬುದನ್ನು ಹೇಳಲು ಹೈಕೋರ್ಟ್ ವಿಫಲವಾಗಿದೆ' ಎಂದೂ ಸಂತ್ರಸ್ತೆಯು ಮನವಿಯಲ್ಲಿ ದೂರಿದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದವರ ಹೆಸರು ಮತ್ತು ಗುರುತನ್ನು, ಒಂದು ವೇಳೆ ಸಂತ್ರಸ್ತೆಯು ಮರಣ ಹೊಂದಿದ್ದರೂ ಬಹಿರಂಗಪಡಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ತಿಳಿಸಿತ್ತು.

         ಇಂಥ ಪ್ರಕರಣಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಸಂವೇದನೆಯಿಂದ ವರ್ತಿಸಬೇಕು ಹಾಗೂ ಜಾಗರೂಕವಾಗಿರಬೇಕು. ಅಪ್ರಾಪ್ತ ವಯಸ್ಕರು ಸೇರಿದಂತೆ ಇತರ ಸಂತ್ರಸ್ತೆಯರ ಗುರುತನ್ನು ಬಹಿರಂಗಪಡಿಸದಂತೆ ಕರ್ತವ್ಯಬದ್ಧತೆ ಹೊಂದಿರಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries