ಕಾಸರಗೋಡು : ನೆಲ್ಲಿಕಟ್ಟೆ ಸನಿಹದ ಪ್ರಸಿದ್ಧ ಪೈಕ ಮಣವಾಟಿ ಬೀವಿ ಉರುಸ್ ಫೆ. 18ರಿಂದ 26ರ ವರೆಗೆ ನಡೆಯಲಿದ್ದು, 27ರಂದು ತುಪ್ಪದ ಅನ್ನ ವಿತರಣೆಯೊಂದಿಗೆ ಉರುಸ್ ಸಂಪನ್ನಗೊಳ್ಳಲಿರುವುದಾಗಿ ಉರುಸ್ ಸಮಿತಿ ಅಧ್ಯಕ್ಷ ಓ.ಪಿ ಹನೀಫಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 18ರಂದು ಬೆಳಗ್ಗೆ 10ಕ್ಕೆ ಓ.ಪಿ.ಹನೀಫ ಧ್ವಜಾರೋಹಣ ನೆರವೇರಿಸುವರು. ರಾತ್ರಿ 8ಕ್ಕೆ ನಡೆಯುವ ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯತ್ತುಲ್ ಉಲೇಮಾ ಪ್ರಧಾನ ಕಾರ್ಯದರ್ಶಿ ಪೆÇ್ರ.ಕೆಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಸೈಯದ್ ಮೊಹಮ್ಮದ್ ತಂಗಳ್ ಮದನಿ ಅಧ್ಯಕ್ಷತೆ ವಹಿಸುವರು. ಪೈಕದ ಮುಖ್ಯ ಇಮಾಂ ಸಹಲಬತ್ತ್ ದಾರಿಮಿ ಆಲಪ್ಪುಳ ಧಾರ್ಮಿಕ ಪ್ರವಚನ ನೀಡುವರು.
ನಂತರ ವಿವಿಧ ದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಸೂದ್ ಸಖಾಫಿ ಗುಡಲೂರು, ಯು.ಕೆ.ಮೊಹಮ್ಮದ್ ಹನೀಫ್ ನಿಝಾಮಿ, ಆಶಿಕ್ ದಾರಿಮಿ ಆಲಪ್ಪುಳ, ಅಬ್ದುಲ್ಲಾ ಮುಜ್‍ತಬ ಫೈಝಿ ಅನಕಾರ, ಸೈಯದ್ ಕೆ.ಎಸ್.ಅಲಿ ತಙಳ್ ಕುಂಬೋಳ್, ಇಬ್ರಾಹಿಂ ಖಲೀಲ್ ಹುದವಿ ಕಲ್ಲಾಯಂ, ಶೌಕತಲಿ ವೆಳ್ಳಾಮುಂಡ್, ಅನ್ವರ್ ಮುಹ್ಯುದ್ದೀನ್ ಹುದವಿ ಆಲುವಾ ಧಾರ್ಮಿಕ ಪ್ರವಚನ ನೀಡುವರು. ಫೆಬ್ರುವರಿ 23 ರಂದು ಸಂಜೆ 4 ಗಂಟೆಗೆ ನಡೆಯುವ ಮಜ್ಲಿಸುನ್ನೂರ್ ಸಭೆಯಲ್ಲಿ ಸೈಯದ್ ಎನ್‍ಪಿಎಂ ಫಝಲ್ ಕೋಯಮ್ಮ ತಂಗಳ್ ಕುನ್ನುಂಗೈ ಮತ್ತು ಸೈಯದ್ ಹಾದಿ ತಂಗಳ್ ನೇತೃತ್ವ ನೀಡುವರು. ಇಬ್ರಾಹಿಂ ಖಲೀಲ್ ಹುದವಿ ಕುಂಬೋಲ್ ಧಾರ್ಮಿಕ ಪ್ರವಚನ ನೀಡುವರು.
ಫೆ.26ರಂದು ಸಮಾರೋಪ ಸಮಾರಂಭವನ್ನು ಸೈಯದ್ ಎಂ.ಎಸ್.ತಙಳ್ ಮದನಿ ಓಳಮುಂಡ್ ಉದ್ಘಾಟಿಸುವರು. ಸೈಯದ್ ಮೊಹಮ್ಮದ್ ತಙಳ್ ಮದನಿ ಅಧ್ಯಕ್ಷತೆ ವಹಿಸುವರು. ಹಾಫಿಲ್ ಕುಮ್ಮನಂ ನಿಜಾಮುದ್ದೀನ್ ಅಸ್‍ಹರಿ ಧಾರ್ಮಿಕ ಪ್ರವಚನ ನೀಡುವರು. 27ರಂದು ಬೆಳಗ್ಗೆ ಅನ್ನಸಂತರ್ಪಣೆಯೊಂದಿಗೆ ಉರುಸ್ ಸಂಪನ್ನಗೊಳ್ಳಳಿದೆ ಎಂದು ತಿಳಿಸಿದರು.
s ಸುದ್ದಿಗೋಷ್ಠಿಯಲ್ಲಿ ಜನರಲ್ ಕನ್ವೀನರ್ ಅಶ್ರಫ್ ಬಾಸ್ಮಲ, ಕೋಶಾಧಿಕಾರಿ ಹನೀಫ ಕರಿಂಗಪ್ಪಳ್ಳ, ಮಖಾಂ ಸಮಿತಿ ಅಧ್ಯಕ್ಷ ಖಾಲಿದ್ ಹಾಜಿ ಕೋಯರ್ಕೊಚ್ಚಿ, ಪೈಕಾ ಮಸೀದಿ ಮುಖ್ಯಸ್ಥ ಇಮಾಂ ಸಹಬಲತ್ ದಾರಿಮಿ ಉಪಸ್ಥಿತರಿದ್ದರು.
ಇಂದಿನಿಂದ ಪ್ರಸಿದ್ಧ ಪೈಕ ಮಣವಾಟಿ ಉರುಸ್
0
ಫೆಬ್ರವರಿ 17, 2023
Tags