ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೋಝಿಕ್ಕೋಡ್ ನಿವಾಸಿ ಶಂಶುದ್ದೀನ್ ಬಂಧಿತ ಆರೋಪಿ.
ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಿದ್ದ. ಹತ್ತು ದಿನಗಳಲ್ಲಿ ರಾಜ್ಯಪಾಲರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ರಾಜ್ಯಪಾಲರ ಕಚೇರಿ ನೀಡಿದ ದೂರಿನ ಮೇರೆಗೆ ಸೈಬರ್ ಪೆÇಲೀಸರು ನಡೆಸಿದ ತನಿಖೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಕೋಝಿಕ್ಕೋಡ್‍ನಿಂದ ಇಮೇಲ್ ಸಂದೇಶ ಬಂದಿರುವ ಮಾಹಿತಿಯನ್ನು ಸೈಬರ್ ಪೆÇಲೀಸರು ಸ್ಥಳೀಯ ಪೆÇಲೀಸರಿಗೆ ರವಾನಿಸಿದ್ದರು. ತನಿಖೆ ವೇಳೆ ಶಂಸುದ್ದೀನ್ ನನ್ನು ಬಂಧಿಸಲಾಗಿದೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗೆ ಹತ್ಯೆ ಬೆದರಿಕೆ; ಕೋಝಿಕ್ಕೋಡ್ ಮೂಲದ ಶಂಸುದ್ದೀನ್ ಬಂಧನ
0
ಫೆಬ್ರವರಿ 16, 2023