ತಿರುವನಂತಪುರ: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನಕಲಿ ದಾಖಲೆ ಸೃಷ್ಟಿಸಿ ಹಣ ಕದಿಯುತ್ತಿರುವುದನ್ನು ವಿಜಿಲೆನ್ಸ್ ಪತ್ತೆಹಚ್ಚಿದೆ.
ಅಧಿಕಾರಿಗಳ ನೆರವಿನಿಂದ ಈ ರೀತಿಯ ವಂಚನೆ ನಡೆಯುತ್ತಿರುವುದಾಗಿ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಕಲೆಕ್ಟರೇಟ್‍ಗಳಲ್ಲಿ ವಿಜಿಲೆನ್ಸ್ ಸರ್ಚ್ ನಡೆಸಲಾಗುತ್ತಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಬಂಧಿಸಿದ ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ಆದರೆ ಏಜೆಂಟರ ಮೂಲಕ ನಕಲಿ ದಾಖಲೆ ಸೃಷ್ಠಿಸಿ ಹಣ ವಸೂಲಿ ಮಾಡುತ್ತಿರುವುದು ವಿಜಿಲೆನ್ಸ್‍ಗೆ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಆಪರೇಷನ್ ಸಿಎಂಆರ್ ಡಿಎಫ್ ಹೆಸರಿನಲ್ಲಿ ರಾಜ್ಯಾದ್ಯಂತ ವಿಜಿಲೆನ್ಸ್ ಮಿಂಚಿನ ಶೋಧ ನಡೆಸಲಾಗುತ್ತಿದೆ.
ಅನರ್ಹರ ಪರವಾಗಿ ಅರ್ಜಿಗಳನ್ನು ಸಲ್ಲಿಸುವುದು ವಂಚನೆಯ ಸಾಮಾನ್ಯ ಕ್ರಮವಾಗಿದೆ. ಇದಕ್ಕಾಗಿ ನಕಲಿ ದಾಖಲೆಗಳನ್ನೂ ಒದಗಿಸುತ್ತಾರೆ. ಏಜೆಂಟರು ಈ ನಿಟ್ಟಿನಲ್ಲಿ ಪೋನ್ ನಂಬರ್ ಮತ್ತು ಬ್ಯಾಕ್ ಅಕೌಂಟ್ ನಂಬರ್ ಕೊಡುತ್ತಾರೆ. ಹಣ ಪಡೆದ ನಂತರ ವಂಚನೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಹಾಗೂ ಅರ್ಜಿ ಸಲ್ಲಿಸಿದವರಿಗೆ ಪಾಲು ನೀಡಲಾಗುತ್ತದೆ.
ಸಾಮಾನ್ಯವಾಗಿ ಕಲೆಕ್ಟರೇಟ್ ಗಳಿಗೆ ಬಂದ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಅರ್ಹರನ್ನು ಗುರುತಿಸಿದ ನಂತರ ಸಚಿವಾಲಯಕ್ಕೆ ಕಳುಹಿಸುತ್ತಾರೆ. ಆಗ ಖಾತೆಗೆ ಹಣ ಬರುತ್ತದೆ. ಆದರೆ ಸಿಎಂಆರ್ ಡಿಎಫ್ ನಿರ್ವಹಣೆ ಮಾಡುವ ಕಲೆಕ್ಟರೇಟ್ ನ ಅಧಿಕಾರಿಗಳು ಏಜೆಂಟರೊಂದಿಗೆ ಶಾಮೀಲಾಗಿ ನಕಲಿ ಆದಾಯ ಪ್ರಮಾಣ ಪತ್ರ ನೀಡಿ ಹಣ ಪಡೆಯುತ್ತಿರುವುದು ವಿಜಿಲೆನ್ಸ್ ಪತ್ತೆ ಹಚ್ಚಿದೆ.
ನಕಲಿ ದಾಖಲೆ, ಅಧಿಕಾರಿಗಳ ಬೆಂಬಲ: ಪರಿಹಾರ ನಿಧಿಯಿಂದ ಹಣ ವಂಚನೆ; ಕಲೆಕ್ಟರೇಟ್ ಕೇಂದ್ರೀಕರಿಸಿ ವಿಜಿಲೆನ್ಸ್ ತಪಾಸಣೆ
0
ಫೆಬ್ರವರಿ 22, 2023