ಕಾಸರಗೋಡು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ಎರಡೂ ಬಜೆಟ್‍ಗಳು ಬಡವರು ಮತ್ತು ಸಣ್ಣ ಉದ್ದಿಮೆದಾರರನ್ನು ಸಂಕಷ್ಟಕ್ಕೆ ತಳ್ಳಿದ್ದು, ಬಹುತೇಕ ಖಾಸಗಿ ಬಸ್‍ಗಳ ಸಂಚಾರಕ್ಕೆ ಸಂಚಕಾರ ತಂದೊಡ್ಡಲಿರುವುದಾಗಿ ಖಾಸಗಿ ಬಸ್ ಮಾಲಿಕರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಗಿರೀಶ್ ತಿಳಿಸಿದ್ದಾರೆ.
ದಿನವೊಂದಕ್ಕೆ ಬಸ್ಸಿಗೆ ಕನಿಷ್ಠ 70 ಲೀಟರ್ ಡೀಸೆಲ್ ಬಳಕೆಯಾಗುತ್ತಿದ್ದಲ್ಲಿ, 140 ರೂ. ಹೆಚ್ಚು ವ್ಯಯವಾಗಲಿದೆ. ತ್ರೈಮಾಸಿಕ 29,910 ರೂ. ತೆರಿಗೆ ಪಾವತಿಸಬೇಕಾಗಿದೆ. 2991ರೂ. ರಿಯಾಯಿತಿ ಲಭಿಸುತ್ತಿದ್ದರೂ, ಸೆಸ್ ರೂಪದಲ್ಲಿ 12,600 ರೂ. ಹೆಚ್ಚಿನ ಖರ್ಚು ತಗಲುತ್ತಿದೆ. ಇದನ್ನು ಹೋಗಲಾಡಿಸಲು ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಶೇ.50ಕ್ಕೆ ನಿಗದಿಪಡಿಸಬೇಕು.
ಶಾಸಕರು, ಸಚಿವರ ವೇತನ, ಭತ್ತೆ ಹೆಚ್ಚಿಸಲಾಗಿದ್ದು, ಕೋವಿಡ್ ಕಾಲಘಟ್ಟದಲ್ಲೂ ಸರ್ಕಾರಿ ನೌಕರರಿಗೂ ತುಟ್ಟಿ ಭತ್ಯೆ ಮತ್ತು ವೇತನ ಹೆಚ್ಚಳ ಮಾಡುವ ಮೂಲಕ ಬಡವರಿಗೆ ಬರೆ ಎಳೆಯುವ ಕೆಲಸ ನಡೆಉತ್ತಿದೆ. ತಾತ್ವಿಕವಾಗಿ, ಸರ್ಕಾರವು ತಿಂಗಳಿಗೆ 1000 ರೂ. ತೆರಿಗೆ ವಿನಾಯಿತಿಯಾಗಿ ನೀಡಿದರೆ, ಇನ್ನೊಂದೆಡೆಯಿಂದ 5ಸಾವಿರ ರೂ. ಸೆಸ್ ರೂಪದಲ್ಲಿ ಕಸಿಯುತ್ತಿದೆ.
ಕರ್ನಾಟಕದಲ್ಲಿ ಡೀಸೆಲ್ ಬೆಲೆ ರೂ.10ರಷ್ಟು ಅಗ್ಗವಾಗಿರುವುದರಿಂದ ಕೆಎಸ್ಸಾರ್ಟಿಸಿ ಬಸ್‍ಗಳಿಗೆ ಅಲ್ಲಿಂದ ಇಂಧನ ತುಂಬಿಸಲು ಅನುಮತಿ ನೀಡಿದಂತೆ ಕಾಸರಗೋಡಿನ ಖಾಸಗಿ ಬಸ್‍ಗಳಿಗೆ ಡೀಸೆಲ್ ಹಾಕಲು ತಲಪ್ಪಾಡಿ, ಗಾಳಿಮುಖ ತೆರಳಲು ತಲಾ ಒಂದು ಹೆಚ್ಚುವರಿ ಟ್ರಿಪ್‍ಗೆ ಅನುಮತಿ ನೀಡುವಂತೆಯೂ ಅವರು ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ, ರಾಜ್ಯ ಸರ್ಕಾರದ ಬಜೆಟ್‍ಗಳಿಂದ ಖಾಸಗಿ ಬಸ್ ಉದ್ದಿಮೆಗೆ ಸಂಕಷ್ಟ
0
ಫೆಬ್ರವರಿ 05, 2023