HEALTH TIPS

ಅಧ್ಯಾಪನ ಹೆಚ್ಚು ಸಂತೃಪ್ತಿ ತಂದುಕೊಡುವ ವೃತ್ತಿ: ಕನ್ನಡಮಾಧ್ಯಮ ಅಧ್ಯಾಪಕರ ಸಂಘ ರಾಜ್ಯ ಸಮ್ಮೇಳನ ಉದ್ಘಾಟಿಸಿ ಡ. ನರೇಂದ್ರ ರೈ ಅಭಿಪ್ರಾಯ




           ಕಾಸರಗೋಡು: ಶಿಕ್ಷಕ ವೃತ್ತಿಯಲ್ಲಿ ಲಭಿಸುವ ಸಂತೃಪ್ತ ಮನೋಭಾವ ಬೇರೆ ಯಾವುದೇ ವೃತ್ತಿಯಲ್ಲಿ ಲಭಿಸದು ಎಂದು ಖ್ಯಾತ ಅಂಕಣಕಾರ, ಪ್ರಗತಿಪರ ಚಿಂತಕ ಡಾ. ನರೇಂದ್ರ ರೈ ದೇರ್ಲ ತಿಳಿಸಿದ್ದಾರೆ. ಅವರು ಕಾಸರಗೋಡು ನಗರ ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನ ಹಾಗೂ ಸಂಘಟನೆ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
             ಶಿಕ್ಷಕರಿಂದ ಮಾತ್ರ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತಂದುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಪಾಲಿಗೆ ಅಂಕವೊಂದೇ ಮಾನದಂಡವಾಗದಂತೆ ನೋಡಿಕೊಳ್ಳುವುದು ಜತೆಗೆ ಮಕ್ಕಳ ಜೀವನಶೈಲಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲೂ ಇದೆ. ಇಂದಿನ ಯಂತ್ರಾಧಾರಿತ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಲ್ಲಿನ ಮಂಥನ ಶಕ್ತಿ ಹಗೂ ಮಾನಸಿಕ ಸ್ಥೈರ್ಯ ಕುಸಿಯಲು ಕಾರಣವಾಗುತ್ತಿದೆ. ವಿಷರಹಿತ ಆಹಾರ, ಶುದ್ಧ ನೀರು, ಶುದ್ಧ ಗಾಳಿ ಲಭಿಸುವ ಬಗೆಗಿನ ಶಿಕ್ಷಣಕ್ಕೆ ಆದ್ಯತೆ ನೀಡುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
               ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಸಿ.ಕೆ ವಾಸು ಸಮಾರಂಭ ಉದ್ಘಾಟಿಸಿದರು. ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ ಹೊರತಂದ ಡೈರಿಯನ್ನು ಡಾ. ನರೇಂದ್ರ ರೈ ದೇರ್ಲ ಬಿಡುಗಡೆಗೊಳಿಸಿದರು.  ಸಂಘದ ಅಧಿಕೃತ ವಕ್ತಾರ ರವೀಂದ್ರನಾಥ ಕೆ.ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಶಿಕ್ಷಣಾಧಿಕಾರ ನಂದಿಕೇಶಣ್ ಎನ್, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್, ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಮಹಾಲಿಂಗೇಶ್ವರ ರಾಜ್ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸದಸ್ಯರಿಂದ ಸ್ವಾಗತ ಗಾನದ ಆಲಾಪನೆ ನಡೆಯಿತು. ಜಯಪ್ರಕಾಶ್ ಪಾಲೆಂಗ್ರಿ ಸ್ವಾಗತಿಸಿದರು. ಶಿಕ್ಷಕಿ ಪದ್ಮಾವತೀ ಎಂ. ಕಾರ್ಯಕ್ರಮ ನಿರೂಪಿಸಿದರು. ಶರತ್ ಕುಮಾರ್ ಎಂ. ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶಶಿರಾಜ್ ಕಾವೂರು ರಚಿಸಿರುವ ಬರ್ಬರೀಕ ನಾಟಕ ಪ್ರದರ್ಶನ, ಪ್ರತಿನಿಧಿ ಸಮ್ಮೇಳನ ನಡೆಯಿತು.
                         ಆಕರ್ಷಕ ಮೆರವಣಿಗೆ:
             ಕಾಸರಗೋಡು ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಿಂದ ನಗರಸಭಾಂಗಣ ವರೆಗೆ ಅಧ್ಯಾಪಕರನ್ನೊಳಗೊಂಡ ಮೆರವಣಿಗೆ ನಡೆಯಿತು. ಆಕರ್ಷಕ ಮುತ್ತುಕೊಡೆ, ಸಿಂಗಾರಿ ಚೆಂಡೆಮೇಳದೊಂದಿಗೆ ಮೆರವಣಿಗೆ ಕಾಸರಗೋಡು ನಗರದ ಮೂಲಕ ಹಾದು ಸಮ್ಮೇಳನ ನಗರ ತಲುಪಿತು. ನೂರಾರು ಮಂದಿ ಶಿಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
                        ಇಂದು ಸಮಾರೋಪ:
             25ರಂದು ಬೆಳಗ್ಗೆ 10ಕ್ಕೆ ಸಂಘದ ರಜತಮಹೋತ್ಸವ ಸಮಾರಂಭವನ್ನು ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸುವರು. ಖ್ಯಾತ ಅಂಕಣಕಾರ ನರೇಂದ್ರ ರಐ ದೇರ್ಲ ಮುಖ್ಯ ಭಾಷಣ ಮಾಡುವರು. ಈ ಸಂದರ್ಭ ಸಂಘಟನೆಯ ನಿವೃತ್ತ ಪರಾಧಿಕಾರಿಗಳಿಗೆ ಗೌರವಾರ್ಪಣೆ ನಡೆಯುವುದು. 11.30ರಿಂದ ವಿಚಾರ ಗೋಷ್ಠಿ, ಮಧ್ಯಾಹ್ನ 2ರಿಂದ ಯಕ್ಷಗಾನ ಬಯಲಾಟ, 3ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸುವರು. ಬಹುಭಾಷಾ ನಟ ಪೃಥ್ವೀ ಅಂಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries